






ಬೆಳ್ತಂಗಡಿ: ಕಾಶಿಪಟ್ಟಣ ಗ್ರಾಮದ ನೂಜಡ್ಡ ಹೊಸಮನೆಯ ನಿವಾಸಿ 16 ವರ್ಷದ ಪ್ರೀತೇಶ್ ಎಸ್. ಪೂಜಾರಿ ಎಂಬ ಬಾಲಕನು ಕಾಣೆಯಾಗಿದ್ದಾನೆಂದು ವರದಿಯಾಗಿದೆ.


ವೇಣೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿರುವ ಇವರ ತಂದೆಯ ಹೆಸರು ಶುಭಕರ್. ಸೆಪ್ಟೆಂಬರ್ 10, 2026ರಂದು ಸಂಜೆ ಸುಮಾರು 5:00 ಗಂಟೆಗೆ ಮನೆಯಿಂದ ಹೊರಟ ಈ ಬಾಲಕನು ಇದುವರೆಗೂ ಮನೆಗೆ ವಾಪಸ್ ಬಾರದೆ ನಾಪತ್ತೆಯಾಗಿದ್ದಾನೆ.
ಈ ಹುಡುಗನ ಬಗ್ಗೆ ಯಾವುದೇ ಮಾಹಿತಿ ಅಥವಾ ಸುಳಿವು ದೊರೆತಲ್ಲಿ ಸಾರ್ವಜನಿಕರು ತಕ್ಷಣವೇ ಕೆಳಕಂಡ ಮೊಬೈಲ್ ಸಂಖ್ಯೆಗೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಸಹಕರಿಸಬೇಕಾಗಿ ವಿನಂತಿಸಲಾಗಿದೆ.ಸಂಪರ್ಕ ಸಂಖ್ಯೆ: 7349494237.









