ದಿವಾಕರ ಪೂಜಾರಿ ಕರ್ಲ ನಿಧನ

0

ಬೆಳ್ತಂಗಡಿ: ಪ್ರಗತಿಪರ ಕೃಷಿಕ ಕಕ್ಕೆಪದವು ಕರ್ಲ ನಿವಾಸಿ ದಿವಾಕರ ಪೂಜಾರಿ (73ವ) ಅನಾರೋಗ್ಯದಿಂದ ಸೆ.7ರಂದು ಸ್ವಗೃಹದಲ್ಲಿ ನಿಧನರಾದರು. ಪಾಂಡವರಕಲ್ಲು ಕೋಟಿ ಚೆನ್ನಯ ಗರಡಿ ಪ್ರಮುಖರಾಗಿ, ಕಜೆಕಾರು ದೇವಸ್ಥಾನದ ಸಮಿತಿ ಸದಸ್ಯರಾಗಿ, ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಪ್ರಗತಿಪರ ಕೃಷಿಕರಾಗಿ, ದಾನಿಯಾಗಿ, ಸಾಧು ಮತ್ತು ಮೃದು ಸ್ವಭಾವದ ವ್ಯಕ್ತಿತ್ವದಿಂದ ಸಮಾಜದಲ್ಲಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ ಮೋನಮ್ಮ ಮೂವರು ಮಕ್ಕಳಾದ ಕೇಸರಿ, ತುಳಸಿಧರ, ಸುರೇಶ್ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here