ಬೆದ್ರಬೆಟ್ಟು ಮರಿಯಾಂಬಿಕಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

0

ಬೆದ್ರಬೆಟ್ಟು ಮರಿಯಾಂಬಿಕಾ ಶಾಲೆಯಲ್ಲಿ ಸಂಭ್ರಮದ 80ನೇ ವರ್ಷದ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣ ಕಾರ್ಯಕ್ರಮವನ್ನು ವಂದನೀಯ ಫಾದರ್ ಜೋಸೆಫ್ ಚೀರನ್ ನಿರ್ದೇಶಕರು, ಕ್ಯಾಟೆಕೀಸಂ ಬೆಳ್ತಂಗಡಿ ಪ್ರಾಂತ್ಯಇವರು ನೆರವೇರಿಸಿ ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭ ಹಾರೈಸಿದರು.

ಶಾಲಾ ಮ್ಯಾನೇಜರ್ ಫಾದರ್ ಮ್ಯಾತ್ಯು ಉಪಸ್ಥಿತರಿದ್ದು ವಿದ್ಯಾರ್ಥಿಗಳು ಭವ್ಯ ಭಾರತದ ನಿರ್ಮಾಣಕ್ಕೆ ಶ್ರಮಿಸುವವರಾಗಬೇಕು ಎಂದು ಹೇಳುತ್ತಾ ಶುಭ ಹಾರೈಸಿದರು.ಟ್ರಸ್ಟಿ ಸದಸ್ಯ ಸುನಿಲ್, ಜೆಲ್ಸ್, ಜೋಸ್, ಫ್ರಾನ್ಸಿಸ್ ವಾಳು ಕಾರನ್, ಶಾಲಾ ಮುಖ್ಯೋಪಾಧ್ಯಾಯಿನಿ ರೆ. ಸಿ. ಲೀನಾ, ಹಳೆ ವಿದ್ಯಾರ್ಥಿಗಳು ಪೋಷಕರು, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಶಿಸ್ತಿನ ಪಥಸಂಚಲನದ ಮೂಲಕ ವಿದ್ಯಾರ್ಥಿಗಳು ಸ್ವಾಗತಿಸಿ ಕೊಂಡರು.

ಶಾಲಾ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ವೇಶಭೂಷಣಗಳನ್ನು ಧರಿಸಿ ಹಾಗೂ ಹೋರಾಟಗಾರರ ಹೆಸರುಗಳನ್ನು ಘೋಷಣೆ ಕೂಗುತ್ತಾ ಸ್ವಾತಂತ್ರ ಹೋರಾಟಗಾರರನ್ನು ಸ್ಮರಿಸಿಕೊಂಡರು. ಬಳಿಕ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮವು ಆರಂಭಗೊಂಡಿತು. ವಿದ್ಯಾರ್ಥಿಗಳು ದೇಶಪ್ರೇಮವನ್ನು ಮೂಡಿಸುವ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ಶಾಲಾ ಮಟ್ಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಕರಾಟೆಯಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿಅಭಿನಂದಿಸಿ ಗೌರವಿಸಲಾಯಿತು. ಎಂಟನೇ ತರಗತಿ ತರಗತಿಯ ಕುಮಾರಿ ಆತ್ಮಿಕ ಸ್ವಾಗತಿಸಿ, ಸಹ ಶಿಕ್ಷಕಿ ಕುಮಾರಿ ವಿಜೇತ ಧನ್ಯವಾದವಿತ್ತರು.

ಕಾರ್ಯಕ್ರಮ ನಿರೂಪಣೆಯನ್ನು ಸಹ ಶಿಕ್ಷಕ ಕೃಷ್ಣಪ್ಪ ಹಾಗೂ ಎಂಟನೇ ತರಗತಿಯ ವಿದ್ಯಾರ್ಥಿ ವೆಲ್ರಾಯ್, 9ನೇ ತರಗತಿಯ ವಿದ್ಯಾರ್ಥಿನಿ ಪ್ರೇಕ್ಷ ನೆರವೇರಿಸಿದರು. ಯಶ್ವಿ1ನೇ ತರಗತಿ , ಶ್ರವಣ್4ನೇ ತರಗತಿ , ಯಶಸ್ವಿ7ನೇ ತರಗತಿ ,ಇಂಪನ 1ನೇ ತರಗತಿ, ಸ್ಪಂದನ್ 8 ನೇ ತರಗತಿ ಇವರುಗಳು ಶಾಲಾ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ನೀಡಿ ಸಹಕರಿಸಿದರು.

LEAVE A REPLY

Please enter your comment!
Please enter your name here