ನಿಟ್ಟಡೆ ಸ. ಉ. ಪ್ರಾ. ಶಾಲೆಯಲ್ಲಿ ಸ್ವಾತಂತ್ರೋತ್ಸವ ಆಚರಣೆ

0

ಕುಂಡದಬೆಟ್ಟು : ನಿಟ್ಟಡೆ ಸರಕಾರಿ ಉನ್ನತಿ ಕರಿಸಿದ ಪ್ರಾಥಮಿಕ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಯನ್ನು ಸಂಭ್ರಮದಿಂದ ಆಚರಿಸಲಾಯಿತು .

ಶಾಲೆಯ SDMC ಅಧ್ಯಕ್ಷ ಮಹಮದ್ ಅಶ್ರಫ್ ಧ್ವಜಾರೋಹಣ ನೆರವೇರಿಸಿದರು. ಸಂವಿಧಾನ ಪೀಠಿಕೆಯ ವಾಚನ ಹಾಗೂ ನಮ್ಮ ಶಾಲಾ ಸೇವಾದಳ ವಿದ್ಯಾರ್ಥಿಗಳಿಂದ ಅತಿಥಿಗಳಿಗೆ ಜನರಲ್ ಸಲ್ಯೂಟ್ , ಕವಾಯತು ಪ್ರದರ್ಶನ ನಡೆಯಿತು. ಪೋಷಕರ ಸಹಕಾರದೊಂದಿಗೆ ನಡೆದ ನಮ್ಮ ಮಕ್ಕಳ ಪುರ ಮೆರವಣಿಗೆ, ಪುರವಣಿಗೆಯಲ್ಲಿ ಊರಿನ ಗಣ್ಯರು, ಸಂಘ ಸಂಸ್ಥೆಯವರು, ಕುಕ್ಕೆ ಡಿ ಗ್ರಾಮ ಪಂಚಾಯತ್ ನವರು ಮಕ್ಕಳಿಗೆ ಸಿಹಿ ತಿಂಡಿ,ಐಸ್ ಕ್ರೀಂ ವಿತರಿಸಿದರು.

ಬಳಿಕ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಭಾಷಣ ದೇಶಭಕ್ತಿ ಗೀತೆ ಕಾರ್ಯಕ್ರಮ ನಡೆಯಿತು. ಈ ಶೈಕ್ಷಣಿಕ ಸಾಲಿನಲ್ಲಿ ಆರಂಭಗೊಂಡ ಶಾಲಾ ಎಲ್ಕೆಜಿ ಯುಕೆಜಿ ವಿದ್ಯಾರ್ಥಿಗಳಿಗೆ ಐ ಡಿ ಕಾರ್ಡ್ ವಿತರಣೆ ಮತ್ತು ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ನಡೆಯಿತು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭರತ್ ರಾಜ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಅಧ್ಯಕ್ಷ ಸ್ಥಾನ ವಹಿಸಿಕೊಂಡ ಎಸ್ ಡಿಎಂಸಿ ಅಧ್ಯಕ್ಷ ಭಾರತ ದೇಶದ 80ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದೇವೆ ಈ ಪವಿತ್ರ ಸಂದರ್ಭದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ ಗಣ್ಯರನ್ನು ಸ್ಮರಿಸಿದರು. ಸ್ವಾತಂತ್ರ ನಮಗೆ ಉಚಿತವಾಗಿ ಸಿಕ್ಕ ಉಡುಗೊರೆಯಲ್ಲ. ಅದು ನಮ್ಮ ಪೂರ್ವಜರ ರಕ್ತ, ಬೆವರು ಮತ್ತು ತ್ಯಾಗದಿಂದ ಗಳಿಸಿದ ಅಮೂಲ್ಯ ಸಂಪತ್ತು ರಾಷ್ಟ್ರಭಕ್ತಿ ಎಂದರೆ ಕೇವಲ ಆಗಸ್ಟ್ 15 & ಜನವರಿ 26 ರಂದು ಧ್ವಜಕ್ಕೆ ಗೌರವ ಸಲ್ಲಿಸುವುದಲ್ಲ.

ಶಾಲೆಯಲ್ಲಿ ಇದರ ಮಹತ್ವವನ್ನು ತಿಳಿದುಕೊಳ್ಳಬೇಕೆಂದು ತಿಳಿಸಿದರು. ನಮ್ಮ ತ್ರಿವರ್ಣ ಧ್ವಜ ಸದಾ ಎತ್ತರದಲ್ಲಿ ಹಾರಾಡಲಿ ಎಂದು ಹೇಳುತ್ತಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು . ಶಾಲಾ ಟಿ ಜಿ ಟಿ ಶಿಕ್ಷಕಿ ಶ ಅನಿತಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ ವಿನೋದ ಕುಮಾರಿ ಸ್ವಾಗತಿಸಿ ಬಹುಮಾನ ವಿತರಣೆಯನ್ನು ವಿವರವನ್ನು ಸಹ ಶಿಕ್ಷಕಿ ಸ್ಮಿತಾ ನಡೆಸಿಕೊಟ್ಟರು. ಶಿಕ್ಷಕ ಗಣೇಶ್ ವಂದಿಸಿದರು .

ಶಾಲೆಯ ಎಲ್ಲಾ ಶಿಕ್ಷಕರು ಕಾರ್ಯಕ್ರಮಕ್ಕೆ ಸಹಕರಿಸಿದರು. ವೇದಿಕೆಯಲ್ಲಿ ನಮ್ಮ ಶಾಲಾ SDMC ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರುಗಳು, ತಾಯಂದಿರ ಸಮಿತಿಯ ಅಧ್ಯಕ್ಷರು ಉಪಾಧ್ಯಕ್ಷರು, ಮಂಜುಶ್ರೀ ಭಜನಾ ಮಂಡಳಿಯ ಅಧ್ಯಕ್ಷ ಆನಂದ ಟೈಲರ್, ಶಾಲಾ ಹಳೆ ವಿದ್ಯಾರ್ಥಿ ಜಯಂತ್ ಕೋಟ್ಯಾನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here