ಶಿರ್ಲಾಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೊಳಗಾದ ರಸ್ತೆಗಳಿಗೆ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

0

ಬೆಳ್ತಂಗಡಿ: ಶಿರ್ಲಾಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ವಾರ ಸುರಿದ ಭಾರಿ ಮಳೆಯಿಂದಾಗಿ ಹಾನಿಗೊಳಗಾದ ವಿವಿಧ ರಸ್ತೆಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಇಂಜಿನಿಯರ್ ದಶರಥ ವಿ. ಕುಂಬಾರ ಅವರು ಸ್ಥಳ ಪರಿಶೀಲನೆ ನಡೆಸಿದರು.

ಕರಂಬಾರು ಗ್ರಾಮದ ಬೀಡಿನಬೆಟ್ಟು (ಕುದುರು) ಪರಿಶಿಷ್ಟ ಜಾತಿ ಕಾಲೋನಿ, ಬಂತ್ತಡ್ಕ ಜನತಾ ಕಾಲೋನಿ, ಶಾಂತಿನಗರದಿಂದ ಕೆರೆಕೋಡಿ ಜೀತಾವಿಮುಕ್ತ ಕಾಲೋನಿ, ಪರ್ಲಾಂಡದಿಂದ ಕಾಜಿಮುಗೇರು ಪರಿಶಿಷ್ಟ ಜಾತಿ ಕಾಲೋನಿ, ನೇತ್ರಬೈಲು ರಸ್ತೆಗಳು ಸೇರಿದಂತೆ ವಿವಿಧ ಪ್ರದೇಶಗಳ ರಸ್ತೆಗಳನ್ನು ಪರಿಶೀಲಿಸಲಾಯಿತು.

ಇದೇ ವೇಳೆ ಬೆಳ್ತಂಗಡಿ–ಬೈಲಡ್ಕ ರಸ್ತೆಯ ಪೆರೆಲ್ ದಡ್ಡಿ ಎಂಬಲ್ಲಿ ಮಳೆಯಿಂದಾಗಿ ರಸ್ತೆ ಕುಸಿತಗೊಂಡಿರುವ ಪ್ರದೇಶವನ್ನೂ ಅಧಿಕಾರಿಗಳು ಪರಿಶೀಲಿಸಿದರು.

ಶಿರ್ಲಾಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಶೀಲ, ಪಂಚಾಯತ್ ಕಾರ್ಯದರ್ಶಿ ಮೋನಮ್ಮ, ಪಂಚಾಯತ್ ಡಾಟಾ ಎಂಟ್ರಿ ಕಂ ಗುಮಾಸ್ತೆ ಪವಿತಾ ಹಾಗೂ ಶಿರ್ಲಾಲು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಪುಷ್ಪರಾಜ್ ಎಂ.ಕೆ. ಉಪಸ್ಥಿತರಿದ್ದರು.

ಸ್ಥಳೀಯವಾಗಿ ಹಾನಿಗೊಳಗಾದ ರಸ್ತೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ತೊಂದರೆಗಳ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಹಾನಿಗೊಳಗಾದ ರಸ್ತೆಗಳನ್ನು ಶೀಘ್ರವಾಗಿ ದುರಸ್ತಿಪಡಿಸುವಂತೆ ಸ್ಥಳೀಯರು ಮನವಿ ಮಾಡಿದರು.

LEAVE A REPLY

Please enter your comment!
Please enter your name here