ಕಾಯರ್ತಡ್ಕದಲ್ಲಿ ‘ಸ್ಯಾನ್ ಕ್ರಿಯೇಷನ್ಸ್’ ನೂತನ ಮಳಿಗೆ ಉದ್ಘಾಟನೆ

0

ಕಾಯರ್ತಡ್ಕ: ಕಾಯರ್ತಡ್ಕದ ಸೇಂಟ್ ಮೇರಿಸ್ ಕಾಂಪ್ಲೆಕ್ಸ್‌ನಲ್ಲಿದ್ದ ಸ್ಯಾನ್ ಕ್ರಿಯೇಷನ್ಸ್ ಸಂಸ್ಥೆಯು ಇದೀಗ ಅಬೂಬಕರ್ ಕಾಂಪ್ಲೆಕ್ಸ್, ಮುಹಿಯುದ್ದೀನ್ ಜುಮಾ ಮಸೀದಿ ಎದುರು, ಕಾಯರ್ತಡ್ಕಕ್ಕೆ ಸ್ಥಳಾಂತರಗೊಂಡಿದ್ದು, ನೂತನ ಮಳಿಗೆಯ ಉದ್ಘಾಟನಾ ಕಾರ್ಯಕ್ರಮ ಸೋಮವಾರ ನಡೆಯಿತು.

ಕಾರ್ಯಕ್ರಮದ ಪ್ರಸ್ತಾವಿಕ ನುಡಿ ಹಾಗೂ ಸಂಸ್ಥೆಯ ಆಶೀರ್ವಚನವನ್ನು ರೆವ. ಫಾ. ಜೋಸ್ ಪೂವತಿಂಗಲ್ ನೆರವೇರಿಸಿದರು. ಸಿವಿಲ್ ಇಂಜಿನಿಯರ್ ಶಿಜೋ ಜೋಸೆಫ್ ಹಾಗೂ ಮೆಟ್ರೋ ಆಯಿಲ್ ಮಿಲ್ ಮಾಲಕರಾದ ರಂಜಿತ್ ಪಿ.ಎಸ್. ಅವರು ರಿಬ್ಬನ್ ಕತ್ತರಿಸುವ ಮೂಲಕ ಸ್ಯಾನ್ ಕ್ರಿಯೇಷನ್ಸ್ ನೂತನ ಮಳಿಗೆಯನ್ನು ಉದ್ಘಾಟಿಸಿದರು.ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಯರ್ತಡ್ಕದ ಮುಖ್ಯೋಪಾಧ್ಯಾಯರಾದ ಕೃಷ್ಣಪ್ಪ, ಅಭಿಲಾಷ್ ಸೌಂಡ್ಸ್ ಮಾಲಕರಾದ ಜೋಸೆಫ್ ಕೆ.ಡಿ., ಸಂಸ್ಥೆಯ ಮಾಲಕರಾದ ಅಪ್ರೀಶ್ ಅವರ ತಾಯಿ ಹಾಗೂ ಮಕ್ಕಳು ದೀಪ ಪ್ರಜ್ವಲನೆ ನೆರವೇರಿಸಿ ಸಂಸ್ಥೆಗೆ ಶುಭ ಹಾರೈಸಿದರು.

ಬೆಳ್ತಂಗಡಿ ತಾಲೂಕು ಅಕ್ರಮ–ಸಕ್ರಮ ಸಮಿತಿ ಸದಸ್ಯರಾದ ಶ್ರೀಧರ್ ಎಸ್. ಅವರು ಕಂಪ್ಯೂಟರ್ ಆನ್ ಮಾಡುವ ಮೂಲಕ ಸಂಸ್ಥೆಯ ಕಂಪ್ಯೂಟರ್ ವ್ಯವಸ್ಥೆಯನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಕಟ್ಟಡ ಮಾಲಕರಾದ ಅಬೂಬಕರ್, ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು, ಸ್ಥಳೀಯ ಗ್ರಾಹಕರು, ಬಂಧು-ಮಿತ್ರರು ಮತ್ತು ಹಿತೈಷಿಗಳು ಉಪಸ್ಥಿತರಿದ್ದು, ಸ್ಯಾನ್ ಕ್ರಿಯೇಷನ್ಸ್‌ನ ಹೊಸ ಆರಂಭಕ್ಕೆ ಶುಭ ಹಾರೈಸಿದರು.

Xerox, Photo Studio, Stationery, Gift Items, Mobile Accessories ಸೇರಿದಂತೆ ವಿವಿಧ ಸೇವೆಗಳನ್ನು ಒದಗಿಸುತ್ತಿರುವ ಸ್ಯಾನ್ ಕ್ರಿಯೇಷನ್ಸ್, ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದೊಂದಿಗೆ ಹೊಸ ಸ್ಥಳದಲ್ಲಿ ತನ್ನ ಸೇವೆಯನ್ನು ಮುಂದುವರಿಸಿದೆ.

LEAVE A REPLY

Please enter your comment!
Please enter your name here