






ಬಳಂಜ: ಜಿಲ್ಲೆಯ ಹೆಸರಾಂತ ಕುಣಿತ ಭಜನಾ ಮಂಡಳಿಗಳಲ್ಲಿ ಒಂದಾದ ಬಳಂಜದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯ ವತಿಯಿಂದ ಆಕಸ್ಮಿಕವಾಗಿ ಬಿದ್ದು ಗಾಯಗೊಂಡಿರುವ ಮಂಡಳಿಯ ಪೋಷಕರು ಹಾಗೂ ಪತ್ರಿಕಾ ವಿತರಕರೂ ಆಗಿರುವ ನಾಲ್ಕೂರು ತೋಟದಪಲ್ಕೆಯ ಅಶೋಕ್ ಕುಲಾಲ್ ಇವರಿಗೆ ಮಂಡಳಿಯ ಸದಸ್ಯರು ಅವರ ಮನೆಗೆ ಭೇಟಿ ನೀಡಿ ಐದು ಸಾವಿರ ರೂಪಾಯಿ ಆರ್ಥಿಕ ನೆರವನ್ನು ನೀಡಿದರು.


ಮಂಡಳಿಯ ಪ್ರಧಾನ ಸಂಚಾಲಕ ಹರೀಶ್ ವೈ ಚಂದ್ರಮ,ಮಂಡಳಿಯ ಅಧ್ಯಕ್ಷೆ ಕು.ಪ್ರಸಿದ್ದಿ ಶೆಟ್ಟಿ, ತರಬೇತುದಾರೆ ಕು.ಮಾನ್ಯ ಹಾಗೂ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯು ಈಗಾಗಲೇ ಹಲವಾರು ಸಮಾಜಮುಖಿ ಸೇವೆಯನ್ನು ಮಾಡುತ್ತಿದ್ದು ಹಲವಾರು ಅಶಕ್ತ ಕುಟುಂಬಗಳಿಗೆ ಬೇರೆ ಬೇರೆ ಸಂದರ್ಭಗಳಲ್ಲಿ ಆರ್ಥಿಕ ಸಹಾಯವನ್ನು ಮಾಡುತ್ತಾ ಬರುತ್ತಿದ್ದಾರೆ.









