






ಬೆಳ್ತಂಗಡಿ: ಮಾದಕ ವಸ್ತು ಸೇವನೆ ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರ ವಿರುದ್ಧ ಕೇಸು ದಾಖಲಿಸಿಕೊಂಡಿರುವ ಬೆಳ್ತಂಗಡಿ ಠಾಣಾ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಪೊಲೀಸ್ ಉಪನಿರೀಕ್ಷಕ ಸಿಕಂದರ್ ಪಾಷಾ ಅವರು ಸಿಬ್ಬಂದಿಯೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಆ.೩ರಂದು ಸಂಜೆ ೬:೪೫ರ ವೇಳೆಗೆ ಬೆಳ್ತಂಗಡಿ ಕಸಬಾ ಗ್ರಾಮದ ಜೈನ್ಪೇಟೆ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಅನುಮಾನಾಸ್ಪದವಾಗಿ ನಿಲ್ಲಿಸಿದ್ದ ಏಂ-೭೦-೯೦೬೫ ಸಂಖ್ಯೆಯ ಆಟೋ ರಿಕ್ಷಾವನ್ನು ಪರಿಶೀಲಿಸಿದಾಗ ಆಟೋದಲ್ಲಿದ್ದ ವ್ಯಕ್ತಿಯೊಬ್ಬರು ಅಮಲಿನಲ್ಲಿರುವುದು ಕಂಡುಬಂದಿದೆ.
ಆತನನ್ನು ವಿಚಾರಣೆ ನಡೆಸಿದಾಗ ಆತ ಕುವೆಟ್ಟು ಗ್ರಾಮದ ಅಲಾದಿಕೊಟ್ಟಿಗೆಯ ಕೆ.ಹೆಚ್.ಅಬ್ದುಲ್ ಹಮೀದ್ ಎಂಬವರ ಮಗ ಮಹಮ್ಮದ್ ನೌಶಾದ್ (೨೯) ಎಂಬುದು ಗೊತ್ತಾಗಿದೆ. ತನ್ನ ಸಹೋದರರಾದ ಬೆಳ್ತಂಗಡಿ ತಾಲೂಕಿನ ನಟೋರಿಯಾಸ್ ಮಾದಕವಸ್ತು ಸಾಗಾಟ ಮತ್ತು ಮಾರಾಟಗಾರನಾದ ಹಮತ್ ಖರಾರ್, ಲತೀಫ್ ಹಾಗೂ ಸಿದ್ದೀಕ್ ಅವರು ಮಾದಕ ವಸ್ತುವನ್ನು ತಲಾ ಒಂದು ಗ್ರಾಂ ಪ್ಯಾಕೆಟ್ಗಳಲ್ಲಿ ನೀಡಿ ಪ್ರತಿ ಗ್ರಾಂಗೆ ೨ ಸಾವಿರದಂತೆ ಮಾರಾಟ ಮಾಡಲು ತನ್ನ ಬಳಿ ನೀಡುತ್ತಿದ್ದಾರೆ.


ಆಟೋ ರಿಕ್ಷಾದ ಮೂಲಕ ಗಿರಾಕಿಗಳಿಗೆ ಸಾಗಿಸಿ ಮಾರಾಟ ಮಾಡುತ್ತಿzನೆ ಹಾಗೂ ಇದೇ ದಿನ ಅವರು ನೀಡಿದ್ದ ಮಾದಕ ವಸ್ತುವನ್ನು ತಾನು ಸೇವಿಸಿzನೆ ಎಂದು ನೌಶಾದ್ ಪೊಲೀಸರಿಗೆ ತಿಳಿಸಿದ್ದಾನೆ.
ಬಳಿಕ ನೌಶಾದ್ನನ್ನು ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆತ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಮಾದಕ ವಸ್ತು ಸೇವನೆ ಹಾಗೂ ಮಾರಾಟದಲ್ಲಿ ತೊಡಗಿದ್ದ ಆರೋಪದಡಿ ಮಹಮ್ಮದ್ ನೌಶಾದ್ ಹಾಗೂ ಆರೋಪಿತನಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಸಹೋದರರಾದ ಹಮ್ಬತ್ ಖರಾರ್, ಲತೀಫ್ ಮತ್ತು ಸಿದ್ದೀಕ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆ.೩ರಂದು ಪ್ರಕರಣ ದಾಖಲಾಗಿದೆ.
ವಾರಂಟ್ನಲ್ಲಿ ಬಂಧನ: ಮಹಮ್ಮದ್ ನೌಷದ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ೦೩-೦೧-೨೦೨೬ರಂದು ಕುವೆಟ್ಟು ಗ್ರಾಮದಲ್ಲಿ ಪತ್ತೆಯಾದ ಎಮ್.ಡಿ.ಎಮ್.ಎ ಮಾದಕವಸ್ತು ಮಾರಾಟ ಹಾಗೂ ಸಾಗಾಟ ಮಾಡಿದ ಪ್ರಕರಣ ದಾಖಲಾಗಿದ್ದು ಮಂಗಳೂರು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ನ್ಯಾಯಾಲಯ ಬಂಧನದ ವಾರಂಟ್ ಜಾರಿ ಮಾಡಿತ್ತು.
ಈ ವಾರಂಟ್ ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸರು ಆರೋಪಿ ಮಹಮ್ಮದ್ ನೌಷದ್ನನ್ನು ಬಂಧಿಸಿ ಆ.೪ರಂದು ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.









