ಮುಂಡಾಜೆ ಸೋಮಂತ್ತಡ್ಕದಲ್ಲಿ ಜಿಯೋ ಟವರ್ ಕುಸಿಯುವ ಭೀತಿ: ಭಾರೀ ಮಳೆಗೆ ಟವರ್ ತಳ ಮಣ್ಣು ಕುಸಿತ – ಗ್ರಾಮಸ್ಥರಲ್ಲಿ ಆತಂಕ

0

ಬೆಳ್ತಂಗಡಿ: ತಾಲೂಕಿನ ಮುಂಡಾಜೆ ಗ್ರಾಮದ ಸೋಮಂತ್ತಡ್ಕ ಪ್ರದೇಶದಲ್ಲಿ ಉಜಿರೆಯಿಂದ ಚಾರ್ಮಾಡಿ ಹಾದು ಹೋಗುವ ರಸ್ತೆಯ ತಿರುವಿನ ಬಲ ಭಾಗದಲ್ಲಿ ಜಿಯೋ ಮತ್ತು ಏರ್ಟೆಲ್ ಮೊಬೈಲ್ ಟವರ್ ಕುಸಿಯುವ ಭೀತಿಯಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.

ಹೆದ್ದಾರಿ ಕಾಮಗಾರಿಗೆ ಮಣ್ಣು ತೆಗೆದ ಕಾರಣ ಈ ಸಮಸ್ಯೆ ಉದ್ಭವಿಸಿದೆ, ಕಳೆದ 2 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಬಲವಾದ ಗಾಳಿಯಿಂದ ಟವರ್‌ನ ತಳಭಾಗದ ಮಣ್ಣು ಸಂಪೂರ್ಣ ಸಡಿಲಗೊಂಡಿದೆ. ಇದರಿಂದ ಟವರ್ ಒಂದು ಕಡೆಗೆ ಗಮನಾರ್ಹವಾಗಿ ಓರೆಯಾಗಿದ್ದು ಯಾವುದೇ ಕ್ಷಣ ಕುಸಿದು ಬೀಳುವ ಸಾಧ್ಯತೆ ಇದೆ.ಟವರ್ ಕುಸಿದರೆ ದೊಡ್ಡ ಅನಾಹುತ ಸಂಭವಿಸುವ ಭೀತಿ ಇದೆ.

ಜೊತೆಗೆ ವಿದ್ಯುತ್ ತಂತಿಗಳು, ರಸ್ತೆಯಲ್ಲಿ ಸಂಚಾರಿಸುವ ವಾಹನ ಸವಾರರಿಗೆ ಹಾನಿಯಾಗುವ ಸಾಧ್ಯತೆಯೂ ಇದೆ.ಕೂಡಲೇ ಅಧಿಕಾರಿಗಳು ಬಂದು ಕ್ರಮ ಕೈಗೊಳ್ಳಬೇಕು” ಎಂದು ಸ್ಥಳೀಯರು ತಿಳಿಸಿದ್ದಾರೆ.

ತಾಲೂಕಿನಲ್ಲಿ ಈಗಾಗಲೇ ಮಳೆಯಿಂದ ಹಲವು ಅವಘಡಗಳು ನಡೆದಿರುವ ಹಿನ್ನೆಲೆಯಲ್ಲಿ, ಈ ವಿಚಾರದಲ್ಲಿ ತಕ್ಷಣ ಮುನ್ನೆಚ್ಚರಿಕೆ ವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here