







ಮಲೆಬೆಟ್ಟು: ಮಹಾಗಣಪತಿ ದೇವಸ್ಥಾನದಲ್ಲಿ ಪ್ರೇರಣಾ ಸಂಜೀವಿನಿ ಒಕ್ಕೂಟ ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ಜೇನು ಕೃಷಿ ತರಬೇತಿ ಕಾರ್ಯಕ್ರಮವು ಸೋಮವಾರ (ಆಗಸ್ಟ್ 3, 2026) ಯಶಸ್ವಿಯಾಗಿ ಜರುಗಿತು.

ಒಕ್ಕೂಟದ ಅಧ್ಯಕ್ಷರಾದ ವಿನುತ ರಜತ್ ಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಂ.ಬಿ.ಕೆ. ಸಂಧ್ಯಾ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಗಣ್ಯರನ್ನು ಹಾಗೂ ರೈತರನ್ನು ಸ್ವಾಗತಿಸಿದರು.


ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಪ್ರಕಾಶ್ ಜೋಶಿ ಶಿರ್ಲಾಲು ಅವರು ಜೇನು ಕೃಷಿಯ ಮಹತ್ವ, ಜೇನು ಪೆಟ್ಟಿಗೆಯ ಸಂಪೂರ್ಣ ಮಾಹಿತಿ ಹಾಗೂ ಕೃಷಿ ಮಾಡುವಾಗ ರೈತರು ಕಡ್ಡಾಯವಾಗಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ಸವಿಸ್ತಾರವಾಗಿ ವಿವರಿಸಿದರು.
ಈ ತರಬೇತಿ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಬಿ.ಟಿ.ಎಂ. ನವನೀತ, ಎ.ಟಿ.ಎಂ. ಗಾಯತ್ರಿ, ಎಲ್.ಸಿ.ಆರ್.ಪಿ. ಶಾಶ್ವತ, ಪಶುಸಖಿ ಏಕಲತಾ ಹಾಗೂ ಕೃಷಿ ಸಖಿ ಭಾಗೀರಥಿ ಉಪಸ್ಥಿತರಿದ್ದರು. ಒಟ್ಟು 25ಕ್ಕೂ ಹೆಚ್ಚು ರೈತರು ಈ ತರಬೇತಿಯ ಪ್ರಯೋಜನ ಪಡೆದುಕೊಂಡರು. ಅಂತಿಮವಾಗಿ ಕೃಷಿ ಸಖಿ ಅವರು ವಂದನಾರ್ಪಣೆಗೈದರು.









