ಕನ್ಯಾಡಿ (ಜಯನಗರ) ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ

0

ಕನ್ಯಾಡಿ: ಕನ್ಯಾಡಿ (ಜಯನಗರ) ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2025-26ನೇ ಸಾಲಿನವಾರ್ಷಿಕ ಮಹಾಸಭೆಯು ಜು. 24ರಂದು ಸಂಘದ ಸಭಾ ಭವನದಲ್ಲಿ ಸಂಘದ ಅಧ್ಯಕ್ಷೆ ಸೌಮ್ಯಲತಾ ಜಯಂತ ಗೌಡ ಅಧ್ಯಕ್ಷತೆಯಲ್ಲಿ ಜರಗಿತು.

ಸಂಘದಲ್ಲಿ ಒಟ್ಟು ರೂ.408949ಲಕ್ಷ ಲಾಭ ಗಳಿಸಿ ಸದಸ್ಯರಿಗೆ 23%ಡಿವಿಡೆಂಡ್ ಮತ್ತು 65%ಬೋನಸ್ ನೀಡಲಾಗುವುದು.ಎಲ್ಲ ಸದಸ್ಯರು ಉತ್ತಮ ಹಾಲು ಸರಬರಾಜು ಮಾಡಬೇಕು,ಅತೀ ಹೆಚ್ಚು ಹಾಲು ಪೂರೈಸಬೇಕು,ಸಂಘದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಸರಬರಾಜು ಮಾಡುತ್ತಿರುವ ಪ್ರಥಮ ಉಮಾದೇವಿ,ದ್ವಿತೀಯ ಗೀತಾ ನೂಚಿಲ, ತೃತೀಯ ಪ್ರೇಮ ಪಾದೆ ಇವರಿಗೆ ಗೌರವಿಸಲಾಹಿತು.

2013ರಿಂದ ಸಂಘದ ಸದಸ್ಯೆ ಸಂಘದಿಂದಲೇ ಪಶು ಆಹಾರ, ಲವಣ ಮಿಶ್ರಣ ಪಡೆದು ಕೊಂಡ ನಿರಂತರ ಹಾಲು ಸರಬರಾಜು ಮಾಡುತ್ತಿದ್ದ ಲಿಜಿ ಮತ್ತು ಪ್ರೇಮ ಸಿ. ಇವರಿಗೆ ಸನ್ಮಾನಿಸಲಾಯಿತು. ಸಂಘದ ನಿರ್ದೇಶಕಿ ಜಲಜ ಸ್ವಾಗತಿಸಿದರು. ಕಾರ್ಯದರ್ಶಿ ರೇವತಿ ಪ್ರಾರ್ಥಿಸಿ, ವರದಿ ವಾಚಿಸಿ, ನಿರೂಪಿಸಿ ವಂದಿಸಿದರು.

ಸಂಘದ ಅಧ್ಯಕ್ಷೆ ಸೌಮ್ಯಲತಾ ಜಯಂತ ಗೌಡ, ಉಪಾಧ್ಯಕ್ಷೆ ಸವಿತಾ,ನಿರ್ದೇಶಕೀಯರಾದ ವಸಂತಿ ಕಾರಿಜೆ, ರತ್ನಾವತಿ ಮಾಳಿಗೆ ಮನೆ, ಸುನಂದ, ಪ್ರೇಮ, ಜಲಜ ಮಾಳಿಗೆ ಮನೆ, ಲತಾ, ದೇವಕಿ, ಗೀತಾ ಕೇರಿಮಾರ್, ಗೀತಾ ವಿ. ನಾಯ್ಕ, ಮಲ್ಲಿಕಾ, ಕಮಲ,ವಿಸ್ತರಣಾ ಅಧಿಕಾರಿ ಸಂದೀಪ್ ಜೈನ್ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here