







ಬೆಳ್ತಂಗಡಿ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದ ಗುಂಡು ಮಿಸ್‌ಫೈರ್ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ವೇಳೆ, ಬೆಳ್ತಂಗಡಿ ತಾಲೂಕಿನ ಜನಪ್ರಿಯ ‘ಗಣಿ ಅಂಬುಲೆನ್ಸ್’ ಸೇವೆಯ ಮಾಲಕ ಹಾಗೂ ಚಾಲಕ ಗಣೇಶ್ ಅವರು ಸಂಪೂರ್ಣ ಉಚಿತವಾಗಿ ಮಾನವೀಯ ಸೇವೆ ಸಲ್ಲಿಸಿ ಮಾದರಿಯಾಗಿದ್ದಾರೆ.
ಉಜಿರೆಯಿಂದ ಮಂಗಳೂರುವರೆಗೆ ಗಾಯಾಳು ಮಗುವನ್ನು ಹೊತ್ತ ಅಂಬುಲೆನ್ಸ್‌ಗೆ ತಮ್ಮ ‘ಗಣಿ ಅಂಬುಲೆನ್ಸ್’ ಮೂಲಕ ಮುನ್ನಡೆ ನೀಡಿ, ಸೈರನ್ ಮೂಲಕ ವಾಹನಗಳಿಗೆ ಎಚ್ಚರಿಕೆ ನೀಡುತ್ತಾ ದಾರಿ ಮಾಡಿಕೊಟ್ಟರು. ಈ ಕಾರಣದಿಂದ ತುರ್ತು ಚಿಕಿತ್ಸೆಗೆ ತೆರಳುತ್ತಿದ್ದ ಅಂಬುಲೆನ್ಸ್ ಯಾವುದೇ ಅಡೆತಡೆಯಿಲ್ಲದೆ ಶೀಘ್ರವಾಗಿ ಮಂಗಳೂರಿನ ಆಸ್ಪತ್ರೆಗೆ ತಲುಪಲು ಸಾಧ್ಯವಾಯಿತು.



ವಿಶೇಷವೆಂದರೆ, ಈ ಸೇವೆಯನ್ನು ಗಣೇಶ್ ಅವರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಂಪೂರ್ಣ ಉಚಿತವಾಗಿ ನೀಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಜೀವ ಉಳಿಸುವ ಕಾರ್ಯದಲ್ಲಿ ಸಮಯದ ಮಹತ್ವವನ್ನು ಅರಿತು ಅವರು ತೋರಿದ ಸಮಯಪ್ರಜ್ಞೆ, ಸೇವಾ ಮನೋಭಾವ ಹಾಗೂ ಮಾನವೀಯತೆ ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.
ಬೆಳ್ತಂಗಡಿ ಭಾಗದಲ್ಲಿ ‘ಗಣಿ ಅಂಬುಲೆನ್ಸ್’ ಎಂದೇ ಪರಿಚಿತರಾಗಿರುವ ಗಣೇಶ್ ಅವರು ಸಂಕಷ್ಟದ ಸಮಯದಲ್ಲಿ ಜೀವ ಉಳಿಸುವ ಕಾರ್ಯಕ್ಕೆ ನೀಡಿದ ಈ ಉಚಿತ ಸೇವೆ ಸಮಾಜಕ್ಕೆ ಮಾದರಿಯಾಗಿದೆ. ಇವರ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಅಭಿನಂದನೆಗಳು ವ್ಯಕ್ತವಾಗುತ್ತಿವೆ.









