ವಾರಂಟ್ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸದ ಆರೋಪ: ಬೆಳ್ತಂಗಡಿ ಪೊಲೀಸ್ ಠಾಣೆಯ ಹೆಡ್‌ಕಾನ್ಸ್‌ಟೇಬಲ್ ಮಾಲ್ತೇಶ್ ಅಮಾನತು

0

ಬೆಳ್ತಂಗಡಿ: ವಾರಂಟ್ ಆರೋಪಿಯೋರ್ವನನ್ನು ಬಂಧಿಸಿದ್ದರೂ ನ್ಯಾಯಾಲಯಕ್ಕೆ ಹಾಜರುಪಡಿಸದೆ ಬಿಡುಗಡೆಗೊಳಿಸಿ ಕರ್ತವ್ಯ ಲೋಪವೆಸಗಿದ ಆರೋಪದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ಹೆಡ್‌ಕಾನ್‌ಸ್ಟೇಬಲ್ ಮಾಲ್ತೇಶ್ ಎಂಬವರನ್ನು ಅಮಾನತುಗೊಳಿಸಿ ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ. ಆದೇಶಿಸಿದ್ದಾರೆ. ಪ್ರಕರಣವೊಂದರ ಆರೋಪಿಯಾಗಿದ್ದು ನ್ಯಾಯಾಲಯದಿಂದ ವಾರಂಟ್ ಜಾರಿಯಾಗಿದ್ದ ಹೇಮಂತ್ ಗೌಡ ಎಂಬಾತನನ್ನು ಬೆಳ್ತಂಗಡಿ ಪೊಲೀಸ್ ಠಾಣಾ ಹೆಡ್ ಕಾನ್‌ಸ್ಟೇಬಲ್ ಮಾಲ್ತೇಶ್ ಅವರು ಉಪ್ಪಿನಂಗಡಿಯಲ್ಲಿ ದಸ್ತಗಿರಿ ಮಾಡಿದ್ದರು. ಆದರೆ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸದೆ ಬಿಡುಗಡೆ ಮಾಡಿ ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಆರೋಪದಲ್ಲಿ ಮಾಲ್ತೇಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಎಸ್ಪಿ ಆದೇಶ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ.

ನಾನು ಯಾವುದೇ ತಪ್ಪೆಸಗಿಲ್ಲ-ಸ್ಪಷ್ಟನೆ: ತನ್ನನ್ನು ಅಮಾನತುಗೊಳಿಸಿ ಎಸ್ಪಿಯವರು ಆದೇಶ ಹೊರಡಿಸಿದ ಬಳಿಕ ಸ್ಪಷ್ಟನೆ ನೀಡಿರುವ ಮಾಲ್ತೇಶ್ ಅವರು ನಾನು ಯಾವುದೇ ತಪ್ಪೆಸಗಿಲ್ಲ ಎಂದು ತಿಳಿಸಿದ್ದಾರೆ. ವಾರಂಟ್ ಆರೋಪಿ ಹೇಮಂತ್ ಗೌಡ ಎಂಬಾತನನ್ನು ನಾನು ಉಪ್ಪಿನಂಗಡಿಯಲ್ಲಿ ದಸ್ತಗಿರಿ ಮಾಡಿರುತ್ತೇನೆ. ನಂತರ ಕೋರ್ಟ್‌ಗೆ ಕರೆ ತಂದಾಗ ಆತನ ಸಂಬಂಧಿಕರಾದ ಚಂದ್ರಾವತಿ ಎಂಬವರು ಬಂದು ವಾರೆಂಟ್ ಆರೋಪಿಯ ಹೆಂಡತಿ ಮೃತ ಪಟ್ಟ ಬಗ್ಗೆ ನನಗೆ ಮಾಹಿತಿ ನೀಡಿ ಬಿಡುಗಡೆಗೆ ರಿಕ್ವೆಸ್ಟ್ ಮಾಡಿದರು.

ಆದರೆ ಮಾನವೀಯತೆಯ ದೃಷ್ಟಿಯಲ್ಲಿಯೂ ನಾನು ಬಿಟ್ಟು ಕಳುಹಿಸಲಿಲ್ಲ. ನ್ಯಾಯಾಲಯದಲ್ಲಿ ಹಾಜರಾದ ಬಗ್ಗೆ ನನಗೆ ಧೃಡೀಕರಣ ಪತ್ರ ಕೊಟ್ಟ ನಂತರವೇ ಬಿಟ್ಟಿರುತ್ತೇನೆ. ನಂತರ ಠಾಣಾ ಎಸ್‌ಐ ಸಿಕಂದರ್ ಪಾಷಾರವರಲ್ಲಿ ನಾನು ವಾರಂಟ್ ಕರ್ತವ್ಯ ಮಾಡುವುದರಿಂದ ಇಲಾಖಾ ವಾಹನವನ್ನು ನನ್ನ ಕರ್ತವ್ಯಕ್ಕೆ ಕೇಳಿರುತ್ತೇನೆ. ಇಲಾಖಾ ವಾಹನವನ್ನು ಸಿಕಂದರ್ ಪಾಷಾರವರೇ ಉಪಯೋಗಿಸುತ್ತಿದ್ದು ಸದ್ರಿ ಇಲಾಖಾ ವಾಹನ ಓಡಾಡಿರುವುದಿಲ್ಲ. ಇಲಾಖೆ ಕೊಟ್ಟಿರುವ ಪೆಟ್ರೋಕಾರ್ಡ್‌ನಿಂದ ತಮ್ಮ ಸ್ವಂತ ವಾಹನಕ್ಕೆ ಇಲಾಖೆ ನೀಡಿರುವ ಇಂಧನ ದುರುಪಯೋಗ ಮಾಡಿರುತ್ತಾರೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಸುಳ್ಳು ಮಾಹಿತಿ ಕೊಟ್ಟಿರುವುದಾಗಿ ಅಮಾನುಷವಾಗಿ ನನ್ನ ಮೇಲೆ ಅಮಾನತು ಆದೇಶ ಮಾಡಿದ್ದಾರೆ. ಇದರಲ್ಲಿ ನನ್ನ ಯಾವುದೇ ತಪ್ಪು ಇಲ್ಲ. ನಾನು ಕಳ್ಳತನದ ಆರೋಪಿಗಳನ್ನು ಹೊರ ರಾಜ್ಯಗಳಿಂದಲೂ ದಸ್ತಗಿರಿ ಮಾಡಿದ್ದು ನಾನು ಯಾವುದೇ ಅನ್ಯಾಯ ಮಾಡಿಲ್ಲ ಎಂದು ಮಾಲ್ತೇಶ್ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here