







ಬೆಳ್ತಂಗಡಿ , ಜೂನ್ 20: ಸಂತ ತೆರೆಸಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ 2026–27ನೇ ಶೈಕ್ಷಣಿಕ ಸಾಲಿನ ಪ್ರೌಢ ಶಾಲಾ ಮಂತ್ರಿ ಮಂಡಲದ ಉದ್ಘಾಟನಾ ಸಮಾರಂಭವು ಜೂ.20 ರಂದು ನಡೆಯಿತು.
ಶಾಲೆಯ ಮುಖ್ಯ ಶಿಕ್ಷಕರಾದ ಭಗಿನಿ ಮೋಲಿ ಡಿಕುನ್ಹ, ಮ್ಯಾನೇಜರ್ ಭಗಿನಿ ತೆರೇಸಿಯ ಶೇರಾ,ಶಿಕ್ಷಕರು, ಮುಖ್ಯ ಅತಿಥಿಗಳಾದ ವಿನ್ಸೆಂಟ್ ಪಿಂಟೋ ಕಥೋಲಿಕ್ ಕೊಆಪರೇಟಿವ್ ಸೊಸೈಟಿಯ ನಿರ್ದೇಶಕರು, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಆಲ್ವಿನ್ ಜೋನ್ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.


ಕಾರ್ಯಕ್ರಮವನ್ನು ಪ್ರಾರ್ಥನಾ ಗೀತೆಯೊಂದಿಗೆ ಮುಖ್ಯ ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು ಆಗಮಿಸಿರುವ ಅತಿಥಿ ಗಳನ್ನು ಉಪ ಪ್ರಾಂಶುಪಾಲರಾದ ಭಗಿನಿ ಸಹಾಯ ಮೇರಿಯವರು ಸ್ವಾಗತಿಸಿದರು . ಬಳಿಕ ಶಾಲಾ ನಾಯಕ ಹತ್ತನೇ ತರಗತಿಯ ವಂಶಿಕ್ ಹೆಚ್ ಬಿ,ಉಪನಾಯಕಿ ಒಂಬತನೇ ತರಗತಿಯ ಶರಲ್ ಪೌಲ್ ಹಾಗೂ ವಿವಿಧ ಮಂತ್ರಿ ಸ್ಥಾನಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳು ಪ್ರಮಾಣ ವಚನ ಸ್ವೀಕರಿಸಿ ತಮ್ಮ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿರ್ವಹಿಸುವುದಾಗಿ ಪ್ರತಿಜ್ಞೆ ಮಾಡಿದರು.ಮುಖ್ಯ ಶಿಕ್ಷಕರು ಹಾಗೂ ಮುಖ್ಯ ಅತಿಥಿಗಳು ಮಾತನಾಡಿ, ಶಾಲಾ ಮಂತ್ರಿ ಮಂಡಳವು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಶಿಸ್ತು, ಜವಾಬ್ದಾರಿ ಮತ್ತು ಸೇವಾ ಮನೋಭಾವವನ್ನು ಬೆಳೆಸುವ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಶಾಲೆಯ ಪ್ರಗತಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಸ್ವಾಗತ ನೃತ್ಯದೊಂದಿಗೆ ಪ್ರಾರಂಭಿಸಿ . ಕೊನೆಯಲ್ಲಿ ನೂತನ ಮಂತ್ರಿ ಮಂಡಳದ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಿ ವಿಜ್ಞಾನ ವಿಭಾಗದ ಉಪನ್ಯಾಸಕಿ ಹಂಸಶ್ರೀಯವರ ವಂದನಾರ್ಪಣೆಗೈದರು , ರಾಷ್ಟ್ರಗೀತೆಯೊಂದಿಗೆ ಸಮಾರಂಭವನ್ನು ಮುಕ್ತಾಯಗೊಳಿಸಲಾಯಿತು.









