







ವೇಣೂರು: ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ಉಂಬೆಟ್ಟು ಇಲ್ಲಿನ ಶಾಲಾ ಮಕ್ಕಳಿಗೆ ಯೂತ್ ಫಾರ್ ಸೇವಾ ಸಂಘಟನೆಯ ಮೂಲಕ ಟೆಕ್ಸಾಸ್ ಇನ್ಸ್ಟಾರುಮೆಂಟ್ಸ್ ಕಂಪನಿ ಬೆಂಗಳೂರು ಇವರು ಜೂನ್ 20ರಂದು ಉಂಬೆಟ್ಟು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಲ್ ಬ್ಯಾಗ್, ನೋಟ್ ಬುಕ್ ಹಾಗೂ ಕಲಿಕಾ ಉಪಕಾರಣಗಳನ್ನು ನೀಡಿದರು.


ಟೆಕ್ಸಾಸ್ ಇನ್ಸ್ಟಾರುಮೆಂಟ್ಸ್ ಕಂಪನಿ ಸಿಬ್ಬಂದಿ ಕನಸಿಕ್ ಗಿರಿ ಹಾಗೂ ಇತರ ಸಿಬ್ಬಂದಿಗಳು ಶಾಲಾ ಮಕ್ಕಳಿಗೆ ಬ್ಯಾಗ್ ವಿತರಿಸಿದರು. ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಯಶೋಧರ ಪೂಜಾರಿ ಉಪಾಧ್ಯಕ್ಷೆ ಗೀತಾ, ಗ್ರಾಮ ಪಂಚಾಯತ್ ಸದಸ್ಯೆ ವೀಣಾ ದೇವಾಡಿಗ , ಎಸ್ ಡಿ ಎಂ ಸಿ ಸದಸ್ಯರು ಹಾಗೂ ಪೋಷಕರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಕಂಪನಿಯಿಂದ ಕಲಿಕಾ ಸಾಮಗ್ರಿಗಳನ್ನು ಒದಗಿಸಿಕೊಡುವಲ್ಲಿ ಸಹಕರಿಸಿದ ಸುಧೀರ್ ರಾವ್ ಅವರನ್ನು ಸ್ಮರಿಸಲಾಯಿತು. ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಈ ರೀತಿಯ ಉತ್ತೇಜನ ನೀಡುತ್ತಿರುವುದು ಶ್ಲಾಘನಿಯ ಕಾರ್ಯವೆಂದು ಶಾಲಾ ಮುಖ್ಯಶಿಕ್ಷಕಿ ಪದ್ಮಾವತಿ ಸ್ವಾಗತಿಸಿದರು, ಶಿಕ್ಷಕಿ ರೇಷ್ಮಾ ಆರ್. ವಂದಿಸಿದರೆ, ಹಿರಿಯ ಶಿಕ್ಷಕಿ ಸುನಂದ ಕಾರ್ಯಕ್ರಮ ನಿರೂಪಿದರು.









