ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಾಜಗೋಪುರ ನಿರ್ಮಾಣದ ಬಗ್ಗೆ ಸಮಾಲೋಚನಾ ಸಭೆ

0

ಬೆಳ್ತಂಗಡಿ: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಾಜಗೋಪುರ ನಿರ್ಮಾಣದ ಬಗ್ಗೆ ಸಮಾಲೋಚನಾ ಸಭೆ ಜೂ.19 ರಂದು ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಾಸಪ್ಪ ಗೌಡ ಕಾಂಜಾನು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮುಕ್ತೇಸರ ಶರತ್ ಕೃಷ್ಣ ಪಡ್ವೇಟ್ನಾಯ, ಬಂಗಾಡಿ ಅರಮನೆಯ ಪ್ರತಿನಿಧಿಯಾಗಿ ಬುಜಬಲಿ ಬಿ. ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರತಿನಿಧಿ ಯಶೋಧರ SKDRDP , ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ನಾಗೇಶ್ ಗೌಡ, ಪೂವಣಿ ಗೌಡ ನೆಕ್ಕಿಲು, ಯಂಗ್ ಚಾಲೆಂಜರ್ಸ್ ಮುಂಡಾಜೆ ಇದರ ಸಂಸ್ಥಾಪಕ ನಾಮ್‌ದೇವ್ ಮುಂಡಾಜೆ, ಶರತ್ ಪರಾಂಜಪೆ ಭಾಗವಹಿಸಿದ್ದರು. ಸುಲೋಚನಾ ಇವರ ಪ್ರಾರ್ಥನೆಯೊಂದಿಗೆ ಅಧ್ಯಕ್ಷ ದಾಸಪ್ಪ ಗೌಡ ಎಲ್ಲರನ್ನು ಸ್ವಾಗತಿಸಿದರು. ಸತೀಶ್ ಕಾಮತ್ ಕಡಿರುದ್ಯಾವರ ಪ್ರಾಸ್ತಾವಿಕ ಮಾತನಾಡಿದರು. ರಾಜೇಶ್ ಕಲ್ಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here