






ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ, ಬೆಳ್ತಂಗಡಿ ಇದರ 28ನೇ ನೂತನ ಶಾಖೆಯು ಗುರುಪುರ-ಕೈಕಂಬದ ಅನಂತ ಮಹಲ್ ಕಾಂಪ್ಲೆಕ್ಸ್ನಲ್ಲಿ ಜೂನ್ 19ರಂದು ಉದ್ಘಾಟನೆಗೊಳ್ಳಲಿದೆ.
ನೂತನ ಶಾಖೆಯ ಕಚೇರಿಯ ಉದ್ಘಾಟನೆಯನ್ನು ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಶೆಟ್ಟಿ ಬೈಲು ಏತಮೊಗರು ದೊಡ್ಡಮನೆ ಅವರು ನೆರವೇರಿಸಲಿದ್ದಾರೆ.


ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಭಗೀರಥ ಜಿ. ಅವರು ವಹಿಸಲಿದ್ದಾರೆ. ಭದ್ರತಾ ಕೊಠಡಿಯನ್ನು ಬಿಲ್ಲವ ಸಮಾಜ ಸೇವಾ ಸಂಘ, ಬಂಟ್ವಾಳ ಇದರ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಭದ್ರತಾ ಕೊಠಡಿಯನ್ನು ಎಸ್ಆರ್ಆರ್ ಮಸಾಲ ಇಂಡಸ್ಟ್ರೀಸ್ ಮಂಗಳೂರು ಇದರ ಮ್ಯಾನೇಜಿಂಗ್ ಡೈರೆಕ್ಟರ್ ಶೈಲೇಂದ್ರ ವೈ.ಸುವರ್ಣ, ಗಣಕ ಯಂತ್ರವನ್ನು ಸಾರ್ವಜನಿಕ ಗಣೇಶೋತ್ಸವ ಸಮಿತಿ, ಕೈಕಂಬ ಇದರ ಅಧ್ಯಕ್ಷ ವಿನೋದ್ ಮಾಡ ಅವರು ಉದ್ಘಾಟಿಸಲಿದ್ದಾರೆ. ನಿರಖು ಠೇವಣಿ ಪತ್ರವನ್ನು ಹೊಟೇಲ್ ಶ್ರೀರಾಮ್ ಕೈಕಂಬದ ಮಾಲಕ ಎಂ.ಹರಿರಾವ್, ಉಳಿತಾಯ ಖಾತೆ ಪುಸ್ತಕವನ್ನು ಗಂಜಿಮಠ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷೆ ಮಾಲತಿ ಎಂ. ವಿತರಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ಬಿಲ್ಲವ ಸಮಾಜ ಸೇವಾ ಸಂಘ, ಗುರುಪುರ ಇದರ ಅಧ್ಯಕ್ಷ ಬಾಲಕೃಷ್ಣ ಕೋಟ್ಯಾನ್, ಉದ್ಯಮಿಗಳಾದ ರೋಮನ್ಸ್ ಬೇಸಿಲ್ ಲೋಬೋ, ಗೋಪಾಲಕೃಷ್ಣಕೆ., ಎಂ.ಎಫ್.ಮುಸ್ತಫಾ, ಸತೀಶ್ಚಂದ್ರ ಇರುವೈಲು ಪಾಣಿಲ, ಕಟ್ಟಡದ ಮಾಲಕ ರಾಜೇಶ್ ಪೈ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಸುನಿಲ್, ಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘ ಕಂದಾವರ ಇದರ ಅಧ್ಯಕ್ಷ ದಿನೇಶ್, ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಮಳಲಿ ಇದರ ಅಧ್ಯಕ್ಷ ಕೇಶವ ಪೂಜಾರಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಬೂಬ ಪೂಜಾರಿ ಮಳಲಿ ಮುಂತಾದವರು ಆಗಮಿಸಲಿದ್ದಾರೆ.
ಗುರುಪುರ ಕೈಕಂಬ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಈ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘದ ಅಧ್ಯಕ್ಷ ಭಗೀರಥ ಜಿ, ಉಪಾಧ್ಯಕ್ಷ ಜಗದೀಶ್ ಚಂದ್ರ ಡಿ. ಕೆ, ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶ್ವಥ್ ಕುಮಾರ್ ಹಾಗೂ ಆಡಳಿತ ಮಂಡಳಿ ವಿನಂತಿಸಿದೆ









