








ಬೆಳ್ತಂಗಡಿ: ಕೊಯ್ಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2026-27 ನೇ ಸಾಲಿನ ಮಂತ್ರಿಮಂಡಲ ರಚನೆಯನ್ನು ಮತದಾನದ ಮೂಲಕ ಜೂ.6 ರಂದು ನಡೆಸಲಾಯಿತು.ಶಾಲಾ ನಾಯಕಿಯಾಗಿ ನಿರೀಕ್ಷಾ, ಹಾಗೂ ಉಪನಾಯಕನಾಗಿ ಮಹಮ್ಮದ್ ಸೈಫುದ್ದೀನ್, ವಿರೋಧ ಪಕ್ಷದ ನಾಯಕನಾಗಿ ಅಂಕಿತ್ ನಾಯಕ್ ಹಾಗೂ ವಿರೋಧ ಪಕ್ಷದ ನಾಯಕಿಯಾಗಿ ಸಾನ್ವಿ ಆಯ್ಕೆಯಾದರು.ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳನ್ನು ಶಿಕ್ಷಕ ವೃಂದದವರು ಅಭಿನಂದಿಸಿದರು.









