ಮೇಲಂತಬೆಟ್ಟು: ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ತಾಯಂದಿರ ಪಾತ್ರ ವಿಶೇಷ ಕಾರ್ಯಕ್ರಮ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್(ರಿ) ಬೆಳ್ತಂಗಡಿ ತಾಲೂಕಿನ ವತಿಯಿಂದ,ಮೆಲಂತಬೆಟ್ಟು ಪ್ರಬುದ್ಧ ಜ್ಞಾನವಿಕಾಸ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ತಾಯಂದಿರ ಪಾತ್ರ ವಿಶೇಷ ಕಾರ್ಯಕ್ರಮ ನಡೆಯಿತು.

ಮೇಲಂತಬೆಟ್ಟಿನ ಸಮುದಾಯ ಭವನದಲ್ಲಿ ಕೀರ್ತಿ ಜ್ಞಾನವಿಕಾಸ ಕೇಂದ್ರದಲ್ಲಿ ಮೇಲ್ವಿಚಾರಕರಾದ ರಾಮ್ ಕುಮಾರ್ ಮಾಹಿತಿಯನ್ನು ನೀಡುತ್ತಾ ಕುಟುಂಬದಲ್ಲಿ ಅತೀ ಮುಖ್ಯವಾಗಿ ತಾಯಿಯು ಮನೆಯ ಎಲ್ಲಾ ಸದಸ್ಯರನ್ನು ಸಮಾನತೆಯಲ್ಲಿ ಪ್ರೀತಿಯಿಂದ ನೋಡಿಕೊಂಡಾಗ,ಮಕ್ಕಳು ಮತ್ತು ಮನೆಯವರು ಕೂಡ ಪರಸ್ಪರ ಹೊಂದಾಣಿಕೆಯೊಂದಿಗೆ ಪ್ರತಿಯೊಂದು ವಿಚಾರಗಳನ್ನು ಮುಕ್ತವಾಗಿ ಮಾತನಾಡಿಕೊಂಡು,ಅದು ಬದುಕಿನಲ್ಲಿ ಸುಖವೇ ಇರಬಹುದು ಅಥವಾ ಕಷ್ಟವೇ ಇರಬಹುದು ಸಮಾನವಾಗಿ ಸ್ವೀಕರಿಸಿ ಬದುಕನ್ನು ಕಟ್ಟಿಕೊಂಡಾಗ ಆ ಮನೆಯ ಸಮಾಜದಲ್ಲಿ ಮಾದರಿಯಾಗಿ ನಡೆದುಕೊಳ್ಳುವುದಕ್ಕೆ ಎರಡು ಮಾತಿಲ್ಲ, ಮನೆಯ ಯಾವುದೇ ವ್ಯವಹಾರದ ವಿಚಾರದಲ್ಲಿಯೂ ಮನೆಯ ಎಲ್ಲಾ ಸದಸ್ಯರು ಮುಕ್ತವಾಗಿ ಮಾತನಾಡಿಕೊಂಡು ಆಗಬೇಕಾದ ಅಭಿವೃದ್ಧಿ ಕಾರ್ಯಗಳು ಹಾಗೂ ಉಜ್ವಲ ಭವಿಷ್ಯದ ಹಿತಾದೃಷ್ಟಿಯಿಂದಲೂ ಕೂಡ ಒಗ್ಗಟ್ಟಿನಿಂದ ಒಂದಾಗಿ ಶ್ರಮಿಸಿದಾಗ ಯಶಸ್ಸು ಸಿಕ್ಕಿಯೇ ಸಿಗುತ್ತದೆ.

ಹೇಮಾವತಿಯ ಅಮ್ಮನವರ ಆಶೀರ್ವಾದದೊಂದಿಗೆ ರಾಜ್ಯದ್ಯಂತ ಇಂದು ಜ್ಞಾನವಿಕಾಸ ಕೇಂದ್ರದ ಮೂಲಕವಾಗಿ ಮಹಿಳೆಯರ ಸಾಮಾಜಿಕವಾಗಿ ಆರ್ಥಿಕ ಸಬಲೀಕರಣದೊಂದಿಗೆ ಪ್ರಗತಿಯನ್ನು ಹೊಂದಿದ್ದು,ಸಮಾಜದಲ್ಲಿಯೇ ಮಾದರಿಯಾಗಿದೆ ಎಂದರು.

ಈ ಸಂದರ್ಭ ಮೇಲ್ವಿಚಾರಕಿ ಶ್ರುತಿ ಜ್ಞಾನವಿಕಾಸ ಕೇಂದ್ರದ ಸಂಯೋಜಕಿ ತಾರ, ಸೇವಾಪ್ರತಿನಿಧಿ ಲೀಲಾವತಿ ಉಪಸ್ಥಿತರಿದ್ದರು. ದುರ್ಗಾಪರಮೇಶ್ವರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡರು, ವೇದಾವತ ಸ್ವಾಗತಿಸಿದರು, ಸೀತಾರವರು ಜ್ಞಾನವಿಕಾಸ ಕೇಂದ್ರದ ಮೂಲಕ ತನ್ನ ಬದುಕನ್ನು ಕಟ್ಟಿಕೊಂಡ ಬಗ್ಗೆ ಅನುಭವವನ್ನು ಹಂಚಿಕೊಂಡರು, ನಳಿನಾಕ್ಷಿ ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here