ಕೊಲ್ಲಿ ದೇವಸ್ಥಾನದಲ್ಲಿ ಶುರುವಾಗಿದೆ ಜಮೀನು ವಿವಾದಬಾವಲಿ ವನ ಇರುವುದು ನಿಜವೇ? ದೇವರ ಕಾಡಾಗಿರುವುದು ಸತ್ಯವೇ?

0

ಬೆಳ್ತಂಗಡಿ: ತಾಲೂಕಿನ ಮಿತ್ತಬಾಗಿಲು ಗ್ರಾಮದ ಕೊಲ್ಲಿ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಜಮೀನೊಂದರ ವಿಚಾರವಾಗಿ ಆರೋಪ ಪ್ರತ್ಯಾರೋಪಗಳು ಕೇಳಿಬರುತ್ತಿದೆ.
ಕೊಲ್ಲಿ ದೇವಸ್ಥಾನದ ಪಕ್ಕ ಇರುವ ಸರ್ವೇ ನಂ. ೬೬/೧ರಲ್ಲಿರುವ ೩.೨೫ ಸೆನ್ಸ್ ಜಾಗದಲ್ಲಿ ಬಾವಲಿಗಳು ನೆಲೆಯಾಗಿದ್ದವು. ಈ ಜಾಗವನ್ನು ಕೊಲ್ಲಿ ದುರ್ಗಾ ಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿದ್ದ ಡಾ. ಲೋಕೇಶ್ ರಾವ್ ಖರೀದಿ ಮಾಡಿದ್ದರು. ನಂತರ, ಅಲ್ಲಿದ್ದ ಮರವನ್ನು ಕಡಿದ ಪರಿಣಾಮ ಬಾವಲಿಗಳು ಮರೆಯಾಗಿದ್ದವು. ಇದು ಕೊಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಆಕ್ರೋಶಕ್ಕೆ ಕಾರಣವಾಗಿತ್ತು.

ಬ್ರಹ್ಮಕಲಶ ಸಂದರ್ಭದಲ್ಲಿ ದೇವರಕಾಡು, ಬಾವಲಿ ವನವೆಂದು ಪ್ರಸಿದ್ಧಿಯಾಗಿದ್ದ ಈ ಜಾಗವನ್ನು ಕೊಲ್ಲಿ ದೇವಸ್ಥಾನದ ವ್ಯಾಪ್ತಿಗೆ ಸೇರಿಸಬೇಕು ಎಂದು ಚರ್ಚಿಸಲಾಗಿತ್ತು. ಆದರೆ, ಏಕಾಏಕಿಯಾಗಿ, ಯಾರ ಗಮನಕ್ಕೂ ತಾರದೆ ಆ ಜಮೀನನ್ನು ಲೋಕೇಶ್ ರಾವ್ ಅವರು ಖರೀದಿ ಮಾಡಿದ್ದಾರೆ ಎಂದು ದೂರಲಾಗಿದೆ.

ದೇವಸ್ಥಾನಕ್ಕೆಂದು ಗೊತ್ತು ಮಾಡಿದ್ದ ಭೂಮಿಯನ್ನು ಅವರು ಖರೀದಿ ಮಾಡಿ, ಬೇಲಿ ಹಾಕಿ, ಬಾವಲಿಗಳು ವಾಸವಾಗಿದ್ದ ಮರಗಳನ್ನು ಕಡಿದಿರುವುದು ಎಷ್ಟು ಸರಿ ಎನ್ನುವುದು ವ್ಯವಸ್ಥಾಪನಾ ಸಮಿತಿಯ ಪ್ರಶ್ನೆ. ಆ ಜಾಗ ದೇವಸ್ಥಾನಕ್ಕೆ ಬೇಕು, ಅವರಿಗೆ ನಾವು ಜಮೀನಿನ ಮೌಲ್ಯ ಕೊಡಲು ಸಿದ್ಧರಿzವೆ, ದೇವಸ್ಥಾನಕ್ಕೆ ಆ ಜಾಗವನ್ನು ಬಿಟ್ಟು ಕೊಡಲಿ ಎಂದು ವ್ಯವಸ್ಥಾಪನಾ ಸಮಿತಿ ಒತ್ತಾಯಿಸುತ್ತಿದ್ದಾರೆ.
ಈ ಜಮೀನು ವರ್ಗ ಜಮೀನಾಗಿದ್ದು, ಅದರ ಮೂಲ ಮಾಲೀಕರಾದ ಶ್ರೀಕಾಂತ್ ರಾವ್ ಅವರಿಂದ ಕೃಷಿಕರಾದ ಡಾ. ಲೋಕೇಶ್ ರಾವ್ ಅವರು ರೂ. ೧೮ ಲಕ್ಷ ನೀಡಿ ೨೦೨೫ನೇ ಜುಲೈ ೧೫ರಂದು ಖರೀದಿ ಮಾಡಿದ್ದರು. ಇದಕ್ಕೆ ಸಂಬಂಧಿಸಿದ ದಾಖಲೆಗಳೂ ತಮ್ಮ ಬಳಿ ಇದೆ ಎಂದು ಡಾ. ಲೋಕೇಶ್ ರಾವ್ ತಿಳಿಸಿದ್ದಾರೆ.
ಈ ಕುರಿತ ವಿಶೇಷ ವರದಿ ಸುದ್ದಿ ಯೂ ಟ್ಯೂಬ್ ಚಾನೆಲ್ ನಲ್ಲಿ ಲಭ್ಯವಿದೆ.

ಭೂಮಿ ನೀಡಲಿ, ಹಣ ಪಾವತಿಸಲು ಸಿದ್ಧ: ಮೊದಲು ಡಾ. ಲೋಕೇಶ್ ರಾವ್ ಅವರು ಈ ಜಾಗ ಖರೀದಿಸಿ ದೇವಸ್ಥಾನಕ್ಕೆ ಒಪ್ಪಿಸುವುದಾಗಿ ಹೇಳಿದ್ದರು. ಆದರೆ ಜಾಗದಲ್ಲಿದ್ದ ಮರ ಕಡಿದಿದ್ದಾರೆ. ಅದರಿಂದಾಗಿ ಅದರಲ್ಲಿ ನೆಲೆಯಾಗಿದ್ದ ಸಾವಿರಾರು ಬಾವಲಿಗಳು ಮರೆಯಾಗಿವೆ. ಅವರು ಜಮೀನಿಗಾಗಿ ಕೊಟ್ಟ ಹಣವನ್ನು ನಾವು ದೇವಸ್ಥಾನದಿಂದ ನೀಡಲು ಸಿದ್ಧರಿzವೆ. ಬಾವಲಿಗಳ ರಕ್ಷಣೆ ಮಾಡಲು, ಇದನ್ನು ದೇವರ ಕಾಡಾಗಿ ಉಳಿಸಲು ದೇವಸ್ಥಾನಕ್ಕೆ ಜಾಗ ಬಿಟ್ಟುಕೊಡಬೇಕು. ಇದಕ್ಕೆ ಬಾವಲಿ ವನ ಎನ್ನುವ ಹಿನ್ನೆಲೆ ಇದೆ. ಈ ಹಿಂದೆಯೂ ಈ ಜಾಗವನ್ನು ನಾಶ ಮಾಡಲು ಪ್ರಯತ್ನ ಪಟ್ಟಿದ್ದರು. ಇದೀಗ ಮತ್ತೆ ಆ ಪ್ರಯತ್ನ ಮಾಡಲಾಗುತ್ತಿದೆ. —ದಾಸಪ್ಪ ಗೌಡ, ಆಡಳಿತ ಮೊಕ್ತೇಸರರು, ಕೊಲ್ಲಿ ದುರ್ಗಾ ಪರಮೇಶ್ವರಿ ದೇವಸ್ಥಾನ

ಮರ ಕಡಿಯಬಾರದಿತ್ತು: ಈ ಜಾಗ ಖರೀದಿ ಮಾಡಿದವರ ಮೇಲೆ ವೈಯುಕ್ತಿಕವಾಗಿ ಯಾವುದೇ ಕೆಟ್ಟ ಅಭಿಪ್ರಾಯ ಇಲ್ಲ. ಈ ಜಾಗದಲ್ಲಿದ್ದ ಮರವನ್ನು ಕಡಿಯಬಾರದಿತ್ತು. ಈ ಜಾಗವನ್ನು ಸರ್ಕಾರ ಪಡೆದುಕೊಂಡು ದೇವರ ಕಾಡಾಗಿ, ಬಾವಲಿ ವನವಾಗಿ ಉಳಿಸಬೇಕು. ನಾವೆಲ್ಲ ಸೇರಿ ಜಮೀನಿನ ಮೊತ್ತವನ್ನು ಕೊಡುತ್ತೇವೆ. ದೇವಸ್ಥಾನಕ್ಕೆ ಆ ಜಾಗವನ್ನು ನೀಡಲಿ.—ಸುರೇಂದ್ರ ಕುಮಾರ್ ಗ್ರಾಮಸ್ಥರು

ಬಾವಲಿ ವನ, ದೇವರ ಕಾಡಾಗಿರಲು ಸಾಧ್ಯವೇ ಇಲ್ಲ: ಶ್ರೀಕಾಂತ್‌ರವರು ಜಾಗ ಕೊಟ್ಟ ಕಾರಣ ನಾನು ಜಮೀನು ಖರೀದಿ ಮಾಡಿzನೆ. ಖರೀದಿ ಮಾಡಿದ ದಿನದಿಂದ ನನಗೆ ಸಮಸ್ಯೆ ಕೊಡುತ್ತಿದ್ದಾರೆ. ನಾನು ಈ ಭೂಮಿ ಖರೀದಿ ಮಾಡಿರುವುದು ದೇವಸ್ಥಾನದ ಹತ್ತಿರ ಊರವರಿಗೆ ಸಹಾಯವಾಗುವ ಅಭಿವೃದ್ಧಿ ಚಟುವಟಿಕೆ ಮಾಡಲು. ಅದು ಬಾವಲಿ ವನ, ದೇವರಕಾಡಾಗಿರಲು ಸಾಧ್ಯವೇ ಇಲ್ಲ. ದೇವಸ್ಥಾನಕ್ಕೆ ಜಾಗ ಬೇಕು ಎಂದಿದ್ದರೆ ಅವರು ಸಾವಧಾನದಿಂದ ಕೇಳಬಹುದಿತ್ತು. ಆದರೆ ಖರೀದಿ ಮಾಡಿದಾಗಿನಿಂದ ನನಗೆ ಹಿಂಸೆ ನೀಡುತ್ತಿದ್ದಾರೆ. ಇಷ್ಟು ತೊಂದರೆ ಕೊಟ್ಟ ಮೇಲೆ ನನಗೆ ಜಮೀನು ಕೊಡಲು ಮನಸ್ಸಾಗುತ್ತದೆಯೇ? ನಾನು ನ್ಯಾಯಯುತವಾಗಿಯೇ, ಸುದುzಶದಿಂದ ಜಮೀನು ಖರೀದಿ ಮಾಡಿದ್ದೇನೆ.—ಡಾ. ಲೋಕೇಶ್ ರಾವ್, ಜಮೀನಿನ ಮಾಲೀಕ

ಜಮೀನನ್ನು ಅನೇಕ ಮಂದಿ ಕೇಳಿದ್ದರು:೨೦೧೩ರಲ್ಲಿ ನಮ್ಮ ಬಳಿ ಜಮೀನು ಕೊಡಿ ಎಂದು ಆಗಿನ ಸಮಿತಿಯವರು ಕೇಳಿದ್ದರು. ಆದರೆ ಯಾವ ಉzಶಕ್ಕೆಂದು ಹೇಳಿರಲಿಲ್ಲ. ಬ್ರಹ್ಮಕಲಶ ಸಂದರ್ಭದಲ್ಲಿ ಏನು ಮಾತುಕತೆ ಆಗಿದೆ ಎನ್ನುವುದು ಗೊತ್ತಿಲ್ಲ. ಆದರೆ ಅಲ್ಲಿ ದುರ್ಗಾದೇವಿ, ದುರ್ಗಾಪರಮೇಶ್ವರಿ ಎರಡು ದೇವಿ ಇರುವುದರಿಂದ ದುರ್ಗಾ ಪರಮೇಶ್ವರಿ ದೇವಿಗೆ ಬೇರೆ ಗುಡಿ ಮಾಡಲು ೮೯ ಸೆನ್ಸ್ ಜಾಗವನ್ನು ಮಾರಾಟ ಮಾಡಿದ್ದೆವು. ಇನ್ನು ಆ ಜಮೀನು ದೇವರ ಕಾಡಾಗಿರಲು ಸಾಧ್ಯವಿಲ್ಲ. ದರ್ಖಾಸು ಜಾಗವನ್ನು ನನ್ನ ಅಜ್ಜ ಖರೀದಿ ಮಾಡಿದ್ದರು. ದೇವಸ್ಥಾನದ ಈಗಿನ ಸಮಿತಿಯವರು ನಮ್ಮ ಬಳಿ ಈ ಜಾಗವನ್ನು ಕೊಡಿ ಎಂದು ಕೇಳಿಲ್ಲ. ಈ ಜಮೀನನ್ನು ಅನೇಕ ಮಂದಿ ಕೇಳಿದ್ದರು. ಅದರಲ್ಲಿ ಲೋಕೇಶ್ ರಾವ್ ಕೂಡ ಒಬ್ಬರು. ಅದು ಬಿಟ್ಟರೆ ಯಾರೇ ಕೇಳಿದ್ದರೂ ನಾವು ಕೊಡುತ್ತಿದ್ದೆವು. ಈ ಭೂಮಿಗೆ ಬಹು ಮಾಲಕತ್ವವಿದ್ದು, ನನ್ನ ಅಣ್ಣ, ಇಬ್ಬರು ಅಕ್ಕಂದಿರು ಮತ್ತು ನಾನು ಪಾಲುದಾರರಾಗಿದ್ದೆವು. —ಶ್ರೀಕಾಂತ್ ರಾವ್, ಮೂಲ ಮಾಲೀಕರು

LEAVE A REPLY

Please enter your comment!
Please enter your name here