






ಬೆಳ್ತಂಗಡಿ: ಬೆಳ್ತಂಗಡಿ ಉಪವಿಭಾಗ ವ್ಯಾಪ್ತಿಯ ಬೆಳ್ತಂಗಡಿ ಗ್ರಾಮಾಂತರ, ಬೆಳ್ತಂಗಡಿ, ಧರ್ಮಸ್ಥಳ, ವೇಣೂರು, ಪುಂಜಾಲಕಟ್ಟೆ, ಬೆಳ್ತಂಗಡಿ ಸಂಚಾರಿ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣೆಗಳಾದ ಹೆಡ್ಕಾನ್ಸ್ಟೇಬಲ್ ಹಾಗೂ ಪೊಲೀಸ್ ಕಾನ್ಸ್ಟೇಬಲ್ಗಳ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ನಡೆದಿದೆ. ಬೆಳ್ತಂಗಡಿ ಗ್ರಾಮಾತರದಿಂದ ಪುಂಜಾಲಕಟ್ಟೆಗೆ ಮುಖ್ಯ ಮಂತ್ರಿ ಚಿನ್ನದ ಪದಕ ಪುರಸ್ಕೃತ ಹೆಡ್ಕಾನಸ್ಟೇಬಲ್ ವಿಜಯ್ ಕುಮಾರ್ ರೈ ವರ್ಗಾವಣೆಗೊಂಡಿದ್ದಾರೆ. ಪುಂಜಾಲಕಟ್ಟೆಯಿಂದ ಬೆಳ್ತಂಗಡಿ ಗ್ರಾಮಾಂತರಕ್ಕೆ ಹೆಡ್ ಕಾನ್ಸ್ಟೇಬಲ್ ರಾಹುಲ್ ರಾವ್, ಬೆಳ್ತಂಗಡಿಯ ದರೆಯಪ್ಪ ಉಪ್ಪಿನಂಗಡಿಗೆ, ಪುಂಜಾಲಕಟ್ಟೆಯ ರೇವಣ್ಣ ವೇಣೂರಿಗೆ, ನಾಂಜುಡ್ಡ ಉಪ್ಪಿನಂಗಡಿಗೆ ವರ್ಗಾವಣೆಗೊಂಡಿದ್ದಾರೆ.


ಮಂಜುನಾಥ್ ಧರ್ಮಸ್ಥಳ ಠಾಣೆಗೆ, ಪುಂಜಾಲಕಟ್ಟೆ ಠಾಣೆಗೆ ಧರ್ಮಸ್ಥಳದ ಪ್ರಮೋದಿನಿ, ಬಂಟ್ವಾಳ ನಗರದ ರಾಜೇಶ್, ಪುತ್ತೂರು ಗ್ರಾಮಾತರದಿಂದ ಚೋಳಪ್ಪ ವರ್ಗಾವಣೆಗೊಂಡಿದ್ದಾರೆ. ಉಪ್ಪಿನಂಗಡಿಯ ಅಭಿಜಿತ್ ಬೆಳ್ತಂಗಡಿ ಠಾಣೆಗೆ, ಬೆಳ್ತಂಗಡಿಯಿಂದ ಮುತ್ತಪ್ಪ ಧರ್ಮಸ್ಥಳಕ್ಕೆ ಹಾಗೂ ಬೆಳ್ತಂಗಡಿ ಸಂಚಾರಿ ಠಾಣೆಗೆ ಧರ್ಮಸ್ಥಳದಿಂದ ಮೆಹಬೂಬ್ ಪಾಟೀಲ್ ಹಾಗೂ ಹುಲಿರಾಜ್ ವರ್ಗಾವಣೆಗೊಂಡಿದ್ದಾರೆ.









