






ಪದ್ಮುಂಜ ಇಲ್ಲಿಯ ಗಾಡಕೋಡಿ ಎಂಬಲ್ಲಿಯ ಬೆಳ್ತಂಗಡಿ ಪೋಲೀಸ್ ಸಿಬ್ಬಂದಿ ಕರುಣಾಕರ ಗೌಡ ಎಂಬವರ ಮನೆಗೆ ಮೇ 14 ರಂದು ರಾತ್ರಿ ಕಳವಾಗಿದೆ ಎಂದು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸುಮಾರು 13 ಲಕ್ಷ ರೂಪಾಯಿ ವೆಚ್ಚದ ಚಿಣ್ಣಾಭರಣ ಒಂದು ಲಕ್ಷ ರೂಪಾಯಿ ನಗದು ಕಳುವಾಗಿದೆ ಎಂದು ದೂರು ನೀಡಿಲಾಗಿದೆ . ಮನೆಯ ಒಡೆಯ ಕರುಣಾಕರ ಮನೆಯಲ್ಲಿ ಒಬ್ಬರೇ ಇದ್ದು ಪತ್ನಿ ಮಕ್ಕಳು ಬೆಂಗಳೂರಿನಲ್ಲಿ ವಾಸಿಸುತ್ತಿರುವುದೆಂದು ತಿಳಿದುಬಂದಿದೆ.


ಕರುಣಾಕರ ರಾತ್ರಿ ಒಂದು ಗಂಟೆಯವರೆಗೂ ಎಚ್ಚರಿಕೆಯಲ್ಲಿದ್ದು ಬೆಳಿಗ್ಗೆ ಏಳುವರೆಗಂಟೆಗೆದ್ದು ನೋಡುವಾಗ ಬಾಗಿಲಿನ ಚಿಲಕ ತೆರೆದಿರುವುನ್ನು ನೋಡಿ ಸಂಶಯಗೊಂಡ ಕರುಣಾಕರ ಗೌಡರು ಪರಿಶೀಲಿಸಿದಾಗ ಮನೆಯೊಳಗೆ ಕಳವಾಗಿರುವುದು ತಿಳಿದುಬಂದಿದೆ.
ಬೆಳ್ತಂಗಡಿ ಉಪ ವಿಭಾಗಾಧಿಕಾರಿ ರೋಹಿಣಿ ಠಾಣಾಧಿಕಾರಿ ಕೌಶಿಕ್ ಬಿ ಸಿ.ಬೆಳ್ತಂಗಡಿ ವ್ರತ್ತ ನಿರೀಕ್ಷಕರು ರವಿ ಬಿ ಎಸ್ ರವರು ಸ್ಥಳಕ್ಕೆ ಭೇಟಿ ತನಿಖೆ ನಡೆಸುತ್ತಿದ್ದಾರೆ.









