ಸತ್ಯದೇವತಾ ದೇವಸ್ಥಾನ ಅಳದಂಗಡಿಯಲ್ಲಿ 23ನೇ ವರ್ಷದ ಉಚಿತ ಪುಸ್ತಕ ವಿತರಣೆಯ ಅರ್ಜಿ ವಿತರಣಾ ಕಾರ್ಯಕ್ರಮ: ಕಿರಿಯ ವಯಸ್ಸಿನಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾದ ಮಂಜುನಾಥ ಶಿವಲಿಂಗಪ್ಪ ಜಿ. ಅವರಿಂದ ಅರ್ಜಿ ಫಾರಂ ವಿತರಣೆ

0

ಅಳದಂಗಡಿ : ಸತ್ಯದೇವತಾ ದೇವಸ್ಥಾನ ಅಳದಂಗಡಿಯ ವತಿಯಿಂದ ಜೂನ್ ತಿಂಗಳಲ್ಲಿ ನಡೆಯಲಿರುವ 23ನೇ ವರ್ಷದ ಉಚಿತ ಪುಸ್ತಕ ವಿತರಣೆಯ ಕಾರ್ಯಕ್ರಮದ ಅರ್ಜಿ ಫಾರಂ ವಿತರಣಾ ಕಾರ್ಯಕ್ರಮವು ಮೇ.15ರಂದು ಅಳದಂಗಡಿಯ ಸತ್ಯದೇವತಾ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಸತ್ಯದೇವತಾ ದೇವಸ್ಥಾನ ಅಳದಂಗಡಿಯ ಆಡಳಿತ ಮೊಕ್ತೇಸರರಾದ ಶಿವಪ್ರಸಾದ್ ಅಜಿಲರು ಪ್ರಾಸ್ತಾವಿಕವಾಗಿ ಮಾತನಾಡಿ, ದೇವಸ್ಥಾನದ ವತಿಯಿಂದ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಶ್ರಮ ಪಡಬೇಕಾದ ಅನಿವಾರ್ಯತೆಯೂ ಇದೆ ಹಾಗೂ ಅಷ್ಟೇ ಅವಕಾಶಗಳು ಇದೆ. ವಿದ್ಯಾರ್ಥಿಗಳು ಅಂಕಗಳಿಗೆ ಅವಲಂಬಿತರಾಗಿ ನಿರಾಶೆಗೊಳಪಡಬಾರದು. ಪೋಷಕರ ಶ್ರಮಕ್ಕೆ ಬೆಲೆಕೊಟ್ಟು ಶ್ರದ್ಧೆಯಿಂದ ವಿದ್ಯಾರ್ಜನೆ ಮಾಡಬೇಕು. ಸಾಧಕರನ್ನು ಸ್ಪೂರ್ತಿಯಾಗಿಸಿಕೊಂಡು ಯಶಸ್ಸು ಕಾಣಬೇಕು ಎಂದರು.

ಕಿರಿಯ ವಯಸ್ಸಿನಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಮಂಜುನಾಥ ಶಿವಲಿಂಗಪ್ಪ ಜಿ. ಅವರು ಬಡಮಕ್ಕಳಿಗೆ ಉಚಿತ ಪುಸ್ತಕ ವಿತರಣೆಯ ಅರ್ಜಿ ಫಾರಂಗಳನ್ನು ವಿತರಿಸಿದರು.ಸಾಮಾನ್ಯ ಕೂಲಿ ಕಾರ್ಮಿಕರ ಮಗನಾಗಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ 2 ಚಿನ್ನದ ಪದಕವನ್ನು ತನ್ನ ಸ್ವಂತ ಪರಿಶ್ರಮದಿಂದ ಪಡೆದು ಕಿರಿಯ ವಯಸ್ಸಿನಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಮಂಜುನಾಥ ಶಿವಲಿಂಗಪ್ಪ ಜಿ. ಅವರಿಗೆ ಗುರುತಿಸಿ ಸನ್ಮಾನಿಸಲಾಯಿತು.

ಅಜಿಲ ಸೀಮೆ ಅರಮನೆಯ ಅರಸರಾದ ಡಾ. ಪದ್ಮಪ್ರಸಾದ್ ಅಜಿಲ, ಪ್ರಗತಿಪರ ಕೃಷಿಕ ಎಂ. ಗಂಗಾಧರ ಮಿತ್ತಮಾರು, ಅಮಣಿಮಂಜು ದೇವಾಡಿಗ, ಉದ್ಯಮಿ ಸುರೇಶ್ ಪೂಜಾರಿ, ನಿತ್ಯಾನಂದ ಶೆಟ್ಟಿ, ರಾಜಶೇಖರ್ ಶೆಟ್ಟಿ, ಮೋಹನ್ ದಾಸ್, ವಿಜಯ ಕುಮಾರ್ ಜೈನ್, ಪ್ರಭಾಕರ ಪೂಜಾರಿ, ದೇವದಾಸ್, ವಿದ್ಯಾರ್ಥಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.ನಿತ್ಯಾನಂದ ಶೆಟ್ಟಿ ನೊಚ್ಚ ಅವರು ಕಾರ್ಯಕ್ರಮ ನಿರೂಪಿಸಿದರು.

ಶ್ರೇಯಾ ದೇವಾಡಿಗ ಪ್ರಾರ್ಥಿಸಿದರು. ಸತ್ಯದೇವತಾ ದೇವಸ್ಥಾನ ಅಳದಂಗಡಿಯ ಆಡಳಿತ ಮೊಕ್ತೇಸರರಾದ ಶಿವಪ್ರಸಾದ್ ಅಜಿಲರು ಸ್ವಾಗತಿಸಿದರು. ಸುಭಾಷ್ಚಂದ್ರ ರೈ ವಂದಿಸಿದರು.

LEAVE A REPLY

Please enter your comment!
Please enter your name here