ಧರ್ಮಸ್ಥಳ: ಅಸ್ವಸ್ಥಗೊಂಡಿದ್ದ ಅಪರಿಚಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

0

ಧರ್ಮಸ್ಥಳ: ಧರ್ಮಸ್ಥಳ ಗ್ರಾಮದ ಧರ್ಮಸ್ಥಳ-ಪಟ್ರಮೆ ರಸ್ತೆಯ ಬದಿಯಲ್ಲಿ ನೇತ್ರಾವತಿ ವಸತಿಗೃಹದ ಸಮೀಪ ಸುಮಾರು 60-65 ವರ್ಷ ಪ್ರಾಯದ ಅಪರಿಚಿತ ಗಂಡಸಿ ಮೃತದೇಹ ಮೇ.6 ರಂದು ಬೆಳಿಗ್ಗೆ 7:50 ಗಂಟೆ ಸುಮಾರಿಗೆ ಯಾವುದೋ ಕಾಯಿಲೆಯಿಂದ ಅಸ್ವಸ್ಥಗೊಂಡವರನ್ನು 108 ಅಂಬ್ಯುಲೆನ್ಸ್ ಮೂಲಕ ಚಿಕಿತ್ಸೆಯ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕಳುಹಿಸಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಹಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಅಪರಿಚಿತ ಗಂಡಸು ಮೇ.8 ರಂದು ಬೆಳಿಗ್ಗೆ 07:56 ಗಂಟೆಗೆ ಮಂಗಳೂರು ವೆನ್ಹಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹದ ಎತ್ತರ 5.9 ಅಡಿ, ದೃಢಕಾಯ ಶರೀರ, ಗೋಧಿ ಮೈಬಣ್ಣ, ದುಂಡು ಮುಖ, ಮುಖದಲ್ಲಿ ಬಿಳಿ ನೆರೆತ ಗಡ್ಡ-ಮೀಸೆ, ತಲೆಯಲ್ಲಿ ಬಿಳಿ ನೆರೆತ ಕೂದಲು, ಎದೆಯ ಬಳಿ ಕಪ್ಪು ಎಳ್ಳು ಮಚ್ಚೆ ಗುರುತು ಮತ್ತು ಮೃತದೇಹದ ಮೈಮೇಲೆ ಆಸ್ಪತ್ರೆಯ ಬಾಬು ಡೈಫರ್, ಮತ್ತು ಕೊರಳಿನಲ್ಲಿ ಲೋಹದ ತಾಯಿತಾ ವನ್ನು ಪೊಣಿಸಿದ ಕಪ್ಪು ದಾರ ಧರಿಸಿರುತ್ತಾರೆ. ಮೃತ ವ್ಯಕ್ತಿಯ ವಾರೀಸುದಾರರು/ ಸಂಬಂಧಿಕರು ದೂರುವಾಣಿ ಸಂಖ್ಯೆ 08256 277253, E-MailID [email protected] PSIDHARMASTHALA: 7795424204, 8277986449. СРІBELTHANGADY: 9480805336, Dist Control: 0824-2220500, ಇದ್ದರೆ ಈ ಕೆಳಕಂಡ ದೂರವಾಣಿಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here