ಪದೋನ್ನತಿಗೊಂಡು ವರ್ಗಾವಣೆಯಾದ ಎಲ್ ಐ ಸಿ ಬೆಳ್ತಂಗಡಿ ಶಾಖಾಧಿಕಾರಿ ಪ್ರಕಾಶ್ ಕೆ. ಇವರಿಗೆ ಬೀಳ್ಕೊಡುಗೆ

0

ಬೆಳ್ತಂಗಡಿ : ಭಾರತೀಯ ಜೀವ ವಿಮಾ ನಿಗಮ ಬೆಳ್ತಂಗಡಿ ಉಪಗ್ರಹ ಶಾಖಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಹಾಸನ ಶಾಖೆಗೆ ಹಿರಿಯ ಶಾಖಾಧಿಕಾರಿಯಾಗಿ ಪದೋನ್ನತಿಗೊಂಡು ವರ್ಗಾವಣೆಯಾದ ಪ್ರಕಾಶ್ ಕೆ. ಇವರಿಗೆ ಬೆಳ್ತಂಗಡಿ ಉಪಗ್ರಹ ಶಾಖೆಯಲ್ಲಿ ಮೇ 8 ರಂದು ಬೀಳ್ಕೊಡುಗೆ ಸಮಾರಂಭ ನಡೆಯಿತು.

ಬಂಟ್ವಾಳ ಶಾಖೆಯ ಉಪ ಶಾಖಾಧಿಕಾರಿ ಮುತ್ತಯ್ಯ ಮರಾಟೆ, ಬೆಳ್ತಂಗಡಿ ಶಾಖೆಯ ಆಡಳಿತಾಧಿಕಾರಿ ಕೇಶವ ಕೆ., ಅಭಿವೃದ್ಧಿ ಅಧಿಕಾರಿಗಳಾದ ಎಂ. ವಿ. ಶೆಟ್ಟಿ, ಟಿ. ಡಿ. ರಾಘವೇಂದ್ರ, ಉದಯಶಂಕರ, ಸಂದೀಪ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಕೋರಿದರು.ವಿಮಾ ಪ್ರತಿನಿಧಿಗಳಾದ ರಾಜೇಶ್ ಕುಮಾರ್, ಪುಷ್ಪರಾಜ್ ಹೆಗ್ಡೆ, ಜಗನ್ನಾಥ ಹೆಚ್., ರಮೇಶ್ ಪೂಜಾರಿ , ಶಶಿಧರ ಎನ್, ರುಡಾಲ್ಫ್ ಲೋಬೊ, ಹರೀಶ್ ಶೆಟ್ಟಿ, ಶ್ರೀಕಾಂತ್ ಕಾಮತ್, ಲತಾ ಪ್ರಭಾಕರ್ ಅನಿಸಿಕೆ ವ್ಯಕ್ತಪಡಿಸಿದರು.ಜಗನ್ನಾಥ ಹೆಚ್. ಪ್ರಾರ್ಥನೆ ಗೈದರು. ಅಭಿವೃದ್ಧಿ ಅಧಿಕಾರಿ ವಿನಯ್ ವಂದಿಸಿದರು.

ಪ್ರತಿನಿಧಿಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದು ವರ್ಗಾವಣೆಗೊಂಡ ಪ್ರಕಾಶ್ ಕೆ. ಇವರನ್ನು ಗೌರವಿಸಿದರು. ಅವರು ಮಾತನಾಡಿ ಬೆಳ್ತಂಗಡಿ ಶಾಖೆಯಲ್ಲಿ ಎಲ್ಲರ ಸಹಕಾರದಿಂದ ಉತ್ತಮ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here