ಬೆಳ್ತಂಗಡಿ: ದಿ. ವಸಂತ ಬಂಗೇರರವರ 2ನೇ ಪುಣ್ಯಸ್ಮರಣೆ; ಸಿಯೋನ್ ಆಶ್ರಮದಲ್ಲಿ ಅನ್ನದಾನ ಸೇವೆ

0

ಬೆಳ್ತಂಗಡಿ: ಮಾಜಿ ಶಾಸಕ ದಿವಂಗತ ವಸಂತ ಬಂಗೇರ ಅವರ ಎರಡನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ, ಗಂಡಿಬಾಗಿಲಿನ ಸಿಯೋನ್ ಆಶ್ರಮ ಟ್ರಸ್ಟ್‌ನಲ್ಲಿ ವಿಶೇಷ ಶ್ರದ್ಧಾಂಜಲಿ ಹಾಗೂ ಅನ್ನದಾನ ಕಾರ್ಯಕ್ರಮ ಮೇ 8 ರಂದು ನೆರವೇರಿತು.ಬೆಳ್ತಂಗಡಿಯ ಶ್ರೀಗುರುದೇವ ವಿವಿಧೋದ್ದೇಶ ಸಹಕಾರ ಸಂಘ (ನಿ.) ಹಾಗೂ ಶ್ರೀ ಗುರುನಾರಾಯಣ ಸ್ವಾಮಿ ಸೇವಾಸಂಘ (ರಿ.) ಇವರುಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಆರಂಭದಲ್ಲಿ ದಿವಂಗತ ವಸಂತ ಬಂಗೇರರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಬೆಳ್ತಂಗಡಿ ತಾಲೂಕಿನ ಪ್ರಮುಖ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದು, ವಸಂತ ಬಂಗೇರರವರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಶ್ರೀಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಭಗೀರಥ ಜಿ., ನಿರ್ದೇಶಕ ಚಿದಾನಂದ ಪೂಜಾರಿ, ಗುರುನಾರಾಯಣ ಸ್ವಾಮಿ ಸೇವಾಸಂಘದ ಅಧ್ಯಕ್ಷ ಜಯ ವಿಕ್ರಂ ಕಲ್ಲಾಪು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಮನೋಹರ್ ಇಳಂತಿಲ, ತನುಜ ಶೇಖರ್, ಅಶ್ವಥ್ ಕುಮಾರ್, ಕೀರ್ತನ್ ಕುಮಾರ್, ರೂಪವತಿ ಹಾಗೂ ಸಿಯೋನ್ ಆಶ್ರಮದ ಆಡಳಿತ ನಿರ್ದೇಶಕ ಡಾ. ಯು.ಸಿ. ಪೌಲೋಸ್, ಟ್ರಸ್ಟೀ ಸದಸ್ಯೆ ಮೇರಿ ಯು.ಪಿ., ಆಡಳಿತಾಧಿಕಾರಿ ಶೋಭಾ ಯು.ಪಿ. ಮತ್ತು ಆಶ್ರಮದ ಸಿಬ್ಬಂದಿಗಳು ಭಾಗವಹಿಸಿದ್ದರು.ಅನ್ನದಾನ ಸೇವೆಯ ಮೂಲಕ ವಸಂತ ಬಂಗೇರರವರ ಪುಣ್ಯಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

LEAVE A REPLY

Please enter your comment!
Please enter your name here