







ಕಕ್ಯಪದವು: ಇಲ್ಲಿನ ಎಲ್.ಸಿ.ಆರ್ ಇಂಡಿಯನ್ ಕಾಲೇಜಿನ ಪದವಿ ವಿಭಾಗದ ವಿದ್ಯಾರ್ಥಿಗಳಿಗಾಗಿ ವೃತ್ತಿಪರ ಕೋರ್ಸ್‌ಗಳ ಕುರಿತು ಮಾಹಿತಿ ಕಾರ್ಯಕ್ರಮವು ಏ11ರಂದು ಸಂಸ್ಥೆಯ ಆವರಣದಲ್ಲಿ ನಡೆಯಿತು.



ಮಂಗಳೂರಿನ ಮೇಧಾವಿ ಸ್ಕಿಲ್ಸ್ ವಿಶ್ವವಿದ್ಯಾಲಯದ ಕ್ವಾಡ್ ಎಐ (Quad AI) ಕೈಗಾರಿಕಾ ಕೌಶಲ್ಯ ಪಾರ್ಟ್ನರ್ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥರಾದ ಚಂದನ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಉತ್ತಮ ಉದ್ಯೋಗಕ್ಕಾಗಿ ಶಿಕ್ಷಣ” ಎಂಬ ಪರಿಕಲ್ಪನೆಯಡಿ ಆಧುನಿಕ ಜಗತ್ತಿನ ತಾಂತ್ರಿಕತೆಗೆ ವಿದ್ಯಾರ್ಥಿಗಳು ತೆರೆದುಕೊಳ್ಳುವ ಅಗತ್ಯವಿದೆ ಎಂದರು. ಅಲ್ಲದೆ, ಪ್ರಸ್ತುತ ಲಭ್ಯವಿರುವ ವಿವಿಧ ಔದ್ಯೋಗಿಕ ಕೋರ್ಸ್‌ಗಳು ಮತ್ತು ಭವಿಷ್ಯದಲ್ಲಿ ಉದ್ಯೋಗಾವಕಾಶಗಳನ್ನು ಹೇಗೆ ಸೃಷ್ಟಿಸಿಕೊಳ್ಳಬಹುದು ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಜೋಸ್ಟನ್ ಲೋಬೋ, ಸಂಯೋಜಕ ಯಶವಂತ್ ಜಿ. ನಾಯಕ್, ಪದವಿ ವಿಭಾಗದ ಮುಖ್ಯಸ್ಥೆ ದೀಕ್ಷಿತಾ ಹಾಗೂ ಕಾಲೇಜಿನ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.









