ಎ. 25: ಬೆಳ್ತಂಗಡಿ ತಾಲೂಕು ಸರಕಾರಿ ನಿವೃತ್ತ ನೌಕರರ ಸಂಘದ ರಜತ ಸಂಭ್ರಮ”ಪ್ರಬುದ್ಧ” ಕಟ್ಟಡದ ಉದ್ಘಾಟನೆ ಪತ್ರಿಕಾ ಗೋಷ್ಠಿ

0

ಬೆಳ್ತಂಗಡಿ : ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ, ಬೆಳ್ತಂಗಡಿ ತಾಲೂಕು ರಾಜ್ಯ ಸರಕಾರಿ ನಿವೃತ್ತ ನೌಕರರ ಮತ್ತು ಹಿರಿಯ ನಾಗರೀಕ ಸೇವಾ ಸೇವಾ ಸಂಸ್ಥೆ ಕೆಲ್ಲಗುತ್ತು ಇದರ ರಜತ ಸಂಭ್ರಮ ಪ್ರಬುದ್ಧ ಕಟ್ಟಡದ ಉದ್ಘಾಟನೆ ಎ. 25 ರಂದು ಕೆಲ್ಲಗುತ್ತು ಅಚ್ಚಿನಡ್ಕದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಬಿ. ವಿಠಲ ಶೆಟ್ಟಿ ಹೇಳಿದರು.

ಅವರು ಎ. 15ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಬೆಳ್ತಂಗಡಿ ತಾಲೂಕು ಸರಕಾರಿ ನಿವೃತ್ತ ನೌಕರರ ಸಂಘ 2000ನೇ ಇಸವಿಯಲ್ಲಿ ಅಂದಿನ ನಿವೃತ್ತ ಜಂಟಿ ನಿರ್ದೇಶಕರಾಗಿದ್ದ ಪಿ. ವೆಂಕಟರಮಣರ ನೇತೃತ್ವದಲ್ಲಿ ಕೆಲವೇ ಮಂದಿಯ ಸದಸ್ಯತ್ವದೊಂದಿಗೆ ಆರಂಭಗೊಂಡಿತು. ಶ ಪಿ. ಕೊಕ್ಕೇಶ್ವರರು ಪ್ರಥಮ ಕಾರ್ಯದರ್ಶಿಯಾಗಿದ್ದರು.

ಎರಡು ವರ್ಷಗಳ ಬಳಿಕ ಈಗಿನ ಬಿ. ವಿಠಲ ಶೆಟ್ಟಿಯವರನ್ನು ಸಂಘದ ಅಧ್ಯಕ್ಷರಾಗಿ ಆಯ್ಕೆ ಮಾಡಿದ ಬಳಿಕ ಸಂಘವು ಸದಸ್ಯತನ ನೊಂದಣಿ ಸಹಿತ ಹತ್ತು ಹಲವು ಜನೋಪಯೋಗಿ ಕಾರ್ಯಕ್ರಮಗಳು ಮತ್ತು ವಿವಿಧ ಚಟುವಟಿಕೆಗಳೊಂದಿಗೆ ನಾಗಾಲೋಟದಿಂದ ಮುನ್ನಡೆಯಿತು.ಮಾಜಿ ಶಾಸಕ, ಮುಖ್ಯ ಸಚೇತಕರಾಗಿದ್ದ ದಿ. ವಸಂತ ಬಂಗೇರರ ಕಾಲದಲ್ಲಿ ಸಂಘಕ್ಕೆ ಸ್ವಂತ ಸೂರು ಹೊಂದುವರೆ ಪ್ರಯತ್ನಿಸಿ ಜಿಲ್ಲಾಧಿಕಾರಿಗಳು ಮತ್ತು ಬಂಗೇರ ಶಿಫಾರಸಿನೊಂದಿಗೆ ಸರಕಾರದ ತನ್ನ ಪ್ರಯತ್ನಪಟ್ಟು ಕಾಶಿಬೆಟ್ಟುವಿನಲ್ಲಿ ಸ್ಥಳ ಗುರುತಿಸಿದರೂ ಕಾನೂನು ತೊಡಕಿನಿಂದ ಸಾಧ್ಯವಾಗಲಿಲ್ಲ.

10 ವರ್ಷಗಳಿಂದ ನಮ್ಮೊಂದಿಗಿದ್ದು, ನಮ್ಮ ಸಂಘದ ಸದಸ್ಯೆ ಅಚ್ಚಿನಡ್ಕ ವೀರಮ್ಮನವರು ತನ್ನ ತಾಯಿಯ ಹೆಸರಿನಲ್ಲಿ ಕಟ್ಟಡ ರಚನೆ ಮಾಡುವ ಶರತ್ತಿನೊಂದಿಗೆ ಸಂಘಕ್ಕೆ 0.10 ಎಕ್ರೆ ಸ್ಥಳವನ್ನು ದಾನ ಮಾಡುವುದಾಗಿ ತಿಳಿಸಿದಾಗ ಸದಸ್ಯರೆಲ್ಲರೂ ಒಮ್ಮತದಿಂದ ಶರತ್ತಿಗೆ ಒಪ್ಪಿಕೊಂಡು ಕಾನೂನಿನ ತೊಡಕಾಗದಂತೆ ಈ ಬಗ್ಗೆ ಬೆಳ್ತಂಗಡಿ ತಾಲೂಕು ಸರಕಾರಿ ನಿವೃತ್ತ ನೌಕರರು ಮತ್ತು ಹಿರಿಯ ನಾಗರಿಕರ ಸೇವಾ ಸಂಸ್ಥೆಯನ್ನು ಹುಟ್ಟು ಹಾಕಿ ಕಾರ್ಯಾರಂಭ ಮಾಡಿದಾಗ ಆರಂಭದಲ್ಲಿ ನಮಗೆ ಸವಾಲಾಗಿ ಪರಿಣಮಿಸಿದರೂ, ಮುಂದೆ ಪ್ರಬುದ್ಧ ಹಿರಿಯರ ಸ್ವಾಭಿಮಾನ ಮತ್ತು ದೃಢಸಂಕಲ್ಪದಿಂದ ಸುಮಾರು 40 ಲಕ್ಷ ರೂಪಾಯಿ ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸಿರುತ್ತೇವೆ.

ಸುಮಾರು 1500 ಚ. ವಿ. ವಿಸ್ತೀರ್ಣವುಳ್ಳ ಸಭಾಂಗಣದ ತಳ ಅಂತಸ್ತು ವಾಹನ ನಿಲುಗಡೆಯಾದರೆ ಪೂರ್ಣಗೊಂಡ ಮೊದಲ ಅಂತಸ್ತು ಸಭಾಂಗಣವಾಗಿರುತ್ತದೆ. ಕಟ್ಟಡದಲ್ಲಿ “ಲಿಫ್ಟ್” ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ. ಹಿರಿಯರಿಗೆ ಮಾರ್ಗದಿಂದ ನೇರ ಸಭಾಂಗಣಕ್ಕೆ ಪ್ರವೇಶ ಪಡೆಯಲು ಕಾಲು ಸಂಕದ ವ್ಯವಸ್ಥೆ ಇರುತ್ತದೆ. ಸಭಾಂಗಣದಲ್ಲಿ ಶೌಚಾಲಯ, ಕೈತೊಳೆಯುವ ವ್ಯವವಸ್ಥೆಯನ್ನು ಕಲ್ಪಿಸಲಾಗಿದೆ.ಈ ಸೇವಾ ಸಂಸ್ಥೆಯ ಕಟ್ಟಡ ಕ್ಕೆ ರೂ. ಒಂದು ಲಕ್ಷ ಮೇಲ್ಪಟ್ಟು ದೇಣಿಗೆ ನೀಡಿದವರ ಭಾವಚಿತ್ರಗಳನ್ನು ಸಭಾಂಗಣದಲ್ಲಿ ಅಳವಡಿಸಲಾಗುವುದು.

ಅಲ್ಲದೆ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಸ್ಮರಣ ಸಂಚಿಕೆ ಪ್ರಬುದ್ಧ 3 ರಲ್ಲಿ ದಾನಿಗಳ ಭಾವಚಿತ್ರ ಅಚ್ಚು ಹಾಕಲಾಗುವುದು.ಮುಂದಿನ ಹಂತದಲ್ಲಿ ಕಟ್ಟಡದ ಕಾಮಗಾರಿ ಬಗ್ಗೆ ಯೋಚಿಸಲಾಗುವುದು ಎಂದರು.ಕಟ್ಟದದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಲಿದ್ದಾರೆ. ಉಜಿರೆ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶಚಂದ್ರ ಜ್ಯೋತಿ ಬೆಳಗಿಸಿ, ಮೂಡಬಿದ್ರೆ ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ನಾಮಫಲಕ ಅನಾವರಣ ಮಾಡುವರು.ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಮೆಸ್ಕಾಂ ಅಧ್ಯಕ್ಷ ಕೆ. ಕೆಹರೀಶ್ ಕುಮಾರ್, ಎಕ್ಸ್ಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಎನ್ನಿತರ ಗಣ್ಯರು, ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.ಪತ್ರಿಕಾ ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ವಿಶ್ವಾಸ್ ರಾವ್, ಉಪಾಧ್ಯಕ್ಷರುಗಳಾದ ಸನ್ಮತ್ ಕುಮಾರ್, ಕುಸುಮಾವತಿ, ಕೋಶಾಧಿಕಾರಿ ಜಗನ್ನಿವಾಸ ರಾವ್, ಸ್ವಾಗತ ಸಮಿತಿಯ ಕಾರ್ಯದರ್ಶಿ ಆರ್. ಎನ್. ಪುವಾಣಿ, ಸ್ಥಳ ದಾನಿ ವೀರಮ್ಮ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here