ಬಳಂಜ ಸುವರ್ಣ ನಿಲಯದಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ವೈಭವದ ಮೆರವಣಿಗೆ,ಭಜನಾ ತಂಡಗಳಿಗೆ ಗೌರವಾರ್ಪಣೆ,ಸಾವಿರಕ್ಕೂ ಹೆಚ್ಚು ಕಲಾಭಿಮಾನಿಗಳು ಭಾಗಿ

0

ಬಳಂಜ ; ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಬಳಂಜ ಸುವರ್ಣ ನಿಲಯ ಮಿನಾಕ್ಷಿ ಮತ್ತು ಸಾಂತಪ್ಪ ಸುವರ್ಣ ಕುಟುಂಬಸ್ಥರ ಹರಕೆಯ ಸೇವಾರ್ಥವಾಗಿ ‘ಶ್ರೀ ದೇವಿ ಮಹಾತ್ಮೆ’ ಎಂಬ ಪೌರಾಣಿಕ ಕಥಾ ಭಾಗವು ಏ.13ರಂದು ಬಳಂಜದ ಸುವರ್ಣ ನಿಲಯದಲ್ಲಿ ಜರುಗಿತು.ಸಂಜೆ ಚೌಕಿಯಲ್ಲಿ ಶ್ರೀ ದೇವಿಯ ಮಹಾಪೂಜೆ ನೆರವೇರಿದ ಬಳಿಕ ವಿದ್ಯುತ್ ದೀಪಾಂಕೃತ ರಂಗಸ್ಥಳದಲ್ಲಿ ಶ್ರೀ ದೇವಿ ಮಹಾತ್ಮೆ ಕಥಾಭಾಗವು ಪ್ರದರ್ಶನಗೊಳ್ಳವುದರ ಮೂಲಕ ಯಕ್ಷಗಾನ ಕಲಾಪ್ರೇಮಿಗಳಿಗೆ ರಸದೌತಣ ನೀಡಿತು.

ರಾತ್ರಿ ಯಕ್ಷಗಾನವನ್ನು ವೀಕ್ಷಿಸುವುದಕ್ಕೆ ಬಂದಂತಹ ಸರ್ವರಿಗೂ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.ಶಾಸಕ ಹರೀಶ್ ಪೂಂಜ, ಅಳದಂಗಡಿ ಶ್ರೀ ಸತ್ಯದೇವತಾ ದೇವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ,ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ, ಮೇಲಂತಬೆಟ್ಟು ಭಗವತಿ ದೇವಸ್ಥಾನದ ಆಡಳಿತ ಮೊಕ್ತೇಸರ ಯೋಗೀಶ್ , ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅದ್ಯಕ್ಷ ರಾಕೇಶ್ ಹೆಗ್ಡೆ, ನಿರ್ದೇಶಕರ ದಿನೇಶ್ ಪಿ.ಕೆ, ದೇಜಪ್ಪ ಪೂಜಾರಿ, ಬಳಂಜ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅದ್ಯಕ್ಷ ಸತೀಶ್ ರೈ ಬಾರ್ದಡ್ಕ, ಬಳಂಜ ಗ್ರಾ.ಪಂ. ಮಾಜಿ ಸದಸ್ಯರಾದ ಯಶೋಧರ ಶೆಟ್ಟಿ, ರವೀಂದ್ರ ಬಿ ಅಮೀನ್, ಬಳಂಜ ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ ರತ್ನರಾಜ್ ಜೈನ್,

ಟ್ರಸ್ಟ್ ಗಳಾದ ಪ್ರಶಾಂತ್ ಡಿ, ಪ್ರವೀಣ್ ಹೆಚ್ ಎಸ್, ಸುವರ್ಣ ಸಾಂಸ್ಕೃತಿಕ ಪ್ರತಿಷ್ಟಾನದ ಅದ್ಯಕ್ಷ ಸಂಪತ್ ಬಿ ಸುವರ್ಣ, ಪತ್ರಕರ್ತರ ಸಂಘದ ಅದ್ಯಕ್ಷ ತುಕರಾಮ್ ಬಿ, ಬೆಳ್ತಂಗಡಿ ಪ್ರೆಸ್ ಕ್ಲಬ್ ಅದ್ಯಕ್ಷ ಪುಷ್ಪರಾಜ್ ಶೆಟ್ಟಿ, ಪತ್ರಕರ್ತರಾದ ಅರವಿಂದ ಹೆಬ್ಬಾರ್, ಭುವನೇಶ್ ಗೇರುಕಟ್ಟೆ, ಅಚುಶ್ರಿ ಬಾಂಗೇರು, ಬಿ ಎಸ್ ಕುಲಾಲ್, ದಿನೇಶ್ ಕಾಶಿಪಟ್ನ, ಪ್ರಸಾದ್ ಶೆಟ್ಟಿ ಏಣಿಂಜೆ, ಸಂತೋಷ್ ಪಿ ಕೋಟ್ಯಾನ್, ಹಾಗೂ ವಿವಿಧ ಕ್ಷೇತ್ರದ ಗಣ್ಯರು, ಬಂಧು, ಬಳಗದವರು,ಊರವರು,ಇತರರು ಉಪಸ್ಥಿತರಿದ್ದು ದೇವರ ಪ್ರಸಾದ ಸ್ವೀಕರಿಸಿದರು.ಯಕ್ಷಗಾನ ಮೊದಲು ಬಳಂಜ ಸುವರ್ಣ ನಿಲಯದಲ್ಲಿ ದೇವರಿಗೆ ಪೂಜೆ ಸಲ್ಲಿಸಿ,ಮೆರವಣಿಗೆ ಮೂಲಕ ರಂಗಸ್ಥಳಕ್ಕೆ ಆಗಮಿಸಲಾಯಿತು.

ನಾಲ್ಕು ಭಜನಾ ತಂಡಗಳನ್ನು ಗೌರವಿಸಲಾಯಿತು.ಸಾವಿರಕ್ಕೂ ಅಧಿಕ ಕಲಾಭಿಮಾನಿಗಳು ಭಾಗವಹಿಸಿದರು.ಮೀನಾಕ್ಷಿ- ಸಾಂತಪ್ಪ ಸುವರ್ಣ, ಮಧುಕರ್, ಮನೋಹರ್ ಬಳಂಜ, ಮಹೇಂದ್ರ ಹಾಗೂ ಕುಟುಂಬಿಕರು ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ,ಸತ್ಕರಿಸಿದರು.

LEAVE A REPLY

Please enter your comment!
Please enter your name here