









ಬೆಳ್ತಂಗಡಿ: ಕಳಿಯ ಗ್ರಾಮದ ಪಂಜಿರ್ಪು ನಿವಾಸಿ ದಿವಾಕರ ಪೂಜಾರಿ ಎಂಬವರು ಏ.8 ರಂದು ಎಂದಿನಂತೆ ಬೆಳಿಗ್ಗೆ ಗುರುವಾಯನಕರೆ ಪೇಟೆಯ ಪಗ್ಸ್ ಬಾರ್ ಮತ್ತು ರೆಸ್ಟೋರೆಂಟ್ ಗೆ ಕೆಲಸಕ್ಕೆ ಹೋದವರು ಮಧ್ಯಾಹ್ನ 12 ಗಂಟೆಗೆ ತಾನು ಉಪಯೋಗಿಸುತ್ತಿದ್ದ ಮೊಬೈಲ್ ನ್ನು ಹೋಟೆಲ್ ನಲ್ಲಿಯೇ ಬಿಟ್ಟು ಹೊರಗೆ ಹೋದವರು ಇದುವರೇಗೆ ಮನೆಗಾಗಲಿ, ಹೋಟೆಲ್ ಗಾಗಲಿ, ಕುಟುಂಬದ ಮನೆಗಾಗಲಿ ವಾಪಾಸ್ಸು ಬಾರದೇ ನಾಪತ್ತೆಯಾಗಿದ್ದಾರೆಂದು ಪತ್ನಿ ಜ್ಯೋತಿ ರವರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ. ಮತ್ತು ಸಾರ್ವಜನಿಕರಿಗೆ ಕಂಡಲ್ಲಿ ತಿಳಿಸುವಂತೆ ಮನವಿ ಸಲ್ಲಿಸಿದ್ದಾರೆ.









