







ಬೆಳ್ತಂಗಡಿ: ಉಜಿರೆಯ ಎಸ್‌ಡಿಎಂ ಕಾಲೇಜಿನ ವಾಣಿಜ್ಯ ವಿಭಾಗವು ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಅಂತರಕಾಲೇಜು ಮಟ್ಟದ ಪ್ರತಿಭೋತ್ಸವ “ಝೇಂಕಾರ 2026″ರಲ್ಲಿ ಬೆಳ್ತಂಗಡಿಯ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಸಾಧನೆಗೈದಿದ್ದಾರೆ.


ಕ್ರೀಡಾ ವಿಭಾಗದಲ್ಲಿ ನಡೆದ ಅತ್ಯಂತ ಕುತೂಹಲಕಾರಿ ‘ಗಲ್ಲಿ ಕ್ರಿಕೆಟ್’ ಪಂದ್ಯಾಟದಲ್ಲಿ ಶ್ರೀ ಗುರುದೇವ ಕಾಲೇಜಿನ ತಂಡಗಳು ಕಾಲೇಜಿನ ವಿದ್ಯಾರ್ಥಿಗಳೇ ಪ್ರಥಮ ಹಾಗೂ ದ್ವಿತೀಯ ಎರಡೂ ಬಹುಮಾನಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಇನ್ನು ಕಲೆ ಮತ್ತು ತಾಂತ್ರಿಕ ವಿಭಾಗದಲ್ಲೂ ಕಾಲೇಜು ತನ್ನ ಛಾಪು ಮೂಡಿಸಿದ್ದು, ‘ರೀಲ್ಸ್ ಮೇಕಿಂಗ್’ (Reels Making) ಸ್ಪರ್ಧೆಯಲ್ಲಿ ವಿದ್ಯಾರ್ಥಿ ಮಹಮ್ಮದ್ ಯಾಸೀನ್ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಈ ಅಪೂರ್ವ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.









