ಮಾ.31: ಭಾರತೀಯ ಸೇನೆಯ ಯೋಧ ಮೋಹನ ಗೌಡ ಕೆ. ಸೇವಾ ನಿವೃತ್ತಿ

1

ಬೆಳ್ತಂಗಡಿ: ಭಾರತೀಯ ಸೇನೆಯ ಯೋಧ ಮೋಹನ ಗೌಡ ಕೆ ಅವರು ಮಾ.31ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.ಬೆಳಾಲು ಗ್ರಾಮದ ಕಾಡಂಡ ಮನೆಯ ಮೋನಪ್ಪ ಗೌಡ ಮತ್ತು ಬೂದಮ್ಮ ದಂಪತಿಯ ದ್ವಿತೀಯ ಪುತ್ರನಾದ ಮೋಹನ ಗೌಡ ಕೆ ಅವರು ಬೆಳ್ತಂಗಡಿ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸವನ್ನು ಮುಗಿಸುತ್ತಿದ್ದಂತೆ ಭಾರತೀಯ ಭೂಸೇನೆಯ ನೇಮಕಾತಿಯಲ್ಲಿ ಆಯ್ಕೆಯಾಗಿ 2002ರಲ್ಲಿ ಸೈನ್ಯಕ್ಕೆ ಸೇರ್ಪಡೆಗೊಂಡಿದ್ದರು.

ಮಧ್ಯಪ್ರದೇಶದ ಭೂಪಾಲ್‌ನಲ್ಲಿ ಸೇನಾ ತರಬೇತಿಯನ್ನು ಮುಗಿಸಿದ ಮೋಹನ ಗೌಡರು ಮೊದಲಿಗೆ ಪಂಜಾಬ್‌ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡರು. ಅಲ್ಲಿ ಮೂರು ವರ್ಷ ಕರ್ತವ್ಯ ಪೂರೈಸಿದ ಬಳಿಕ ಅವರನ್ನು ಜಮ್ಮು ಕಾಶ್ಮಿರದ ರಾಷ್ಟ್ರೀಯ ರೈಫಲ್ಸ್‌ನಲ್ಲಿ ನಿಯೋಜಿಸಲಾಗಿತ್ತು. ಅಲ್ಲಿ ಎರಡೂವರೆ ವರ್ಷ ಪೂರೈಸಿದ ಬಳಿಕ ಅವರು ಬೆಂಗಳೂರಿನ ಸೇನಾ ಶಿಬಿರಕ್ಕೆ ವರ್ಗಾವಣೆಗೊಂಡರು. ಬೆಂಗಳೂರಿನಲ್ಲಿ ಮೂರು ವರ್ಷ ಕರ್ತವ್ಯ ಪೂರೈಸಿದ ಬಳಿಕ ಪಶ್ಚಿಮ ಬಂಗಾಳದಲ್ಲಿ ಎರಡು ವರ್ಷ ಹಾಗೂ ಮಹಾರಾಷ್ಟ್ರದ ಪೂನಾದಲ್ಲಿ ಮೂರು ವರ್ಷ ಕರ್ತವ್ಯ ಪೂರೈಸಿದರು.

ನಂತರ ಪಂಜಾಬ್‌ನ ಪಠಾಣ್‌ಕೋಟ್‌ಗೆ ತಾತ್ಕಾಲಿಕ ಸೇವೆಗಾಗಿ ನಿಯೋಜನೆಗೊಂಡು, ಅಲ್ಲಿಂದ ಕಾರ್ಗಿಲ್, ದ್ರಾಸ್, ಲಡಾಖ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ. ಅಲ್ಲಿ ಮೂರು ವರ್ಷ ಪೂರೈಸಿದ ಬಳಿಕ ನಾಗಾಲ್ಯಾಂಡ್‌ನ ಧೀಮಾಪುರ್‌ನಲ್ಲಿ ಮೂರು ವರ್ಷ ಸೇವೆ ಸಲ್ಲಿಸಿದ್ದಾರೆ. ಬಳಿಕ ತೆಲಂಗಾಣದ ಸಿಕಂದರಾಬಾದ್‌ನ ಮಿಲಿಟರಿ ಕಾಲೇಜಿನಲ್ಲಿ ಎರಡೂವರೆ ವರ್ಷ ಸೇವೆ ಸಲ್ಲಿಸಿದ್ದು ಮಾ.31ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ. ಇವರು ಪತ್ನಿ ಜಯಶ್ರೀ ಮತ್ತು ಮಕ್ಕಳಾದ ವಂಶಿ ಹಾಗೂ ದಿಯಾನ್ ಜೊತೆ ಪ್ರಸ್ತುತ ಬೆಳಾಲು ಗ್ರಾಮದ ಕಾಡಂಡ ನಿವಾಸದಲ್ಲಿ ವಾಸವಾಗಿದ್ದಾರೆ. ದೇಶ ಸೇವೆಯ ಕರ್ತವ್ಯವನ್ನು ಪೂರೈಸಿ ಮೋಹನ ಗೌಡ ಕೆ ಅವರು ಎ.5ರಂದು ಹುಟ್ಟೂರಿಗೆ ಆಗಮಿಸಲಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

1 COMMENT

  1. April 1 ಕ್ಕೆ ಇವರು ಕೂಡ ನಿವೃತ್ತಿ ಹೊಂದಿ ಮನೆಗೆ ಬರುತ್ತಿದ್ದಾರೆ ಸರ್

    ದೇಶ ಸೇವೆ ಗೈದು ನಿವೃತ್ತಿ ಆಗಿ ಊರಾದ ಹೆಬ್ರಿ ಕಬ್ಬಿನಾಲೆ ಗೆ ಏಪ್ರಿಲ್ 1 ರಂದು ಆಗಮಿಸುವ ನಿಮಗೆ ಶುಭವಾಗಲಿ ಜೈ ಹಿಂದ್ 🙏 ಮುಗೇರ ಸಮುದಾಯ का app आ गया है । सभी सदस्य नीचे दिए लिंक पर क्लिक करके तुरंत ही जुड़ें और अपना सदस्य Community कार्ड प्राप्त करे – Powered by Kutumb App

    https://kutumbapp.page.link/DKjW8d4afsysXE6w7

LEAVE A REPLY

Please enter your comment!
Please enter your name here