







ಬೆಳ್ತಂಗಡಿ: ಪ್ರತಿಷ್ಠಿತ ಮುಳಿಯ ಜ್ಯುವೆಲ್ಲರ್ಸ್ ಸಂಸ್ಥೆಯ ವತಿಯಿಂದ ಆಯೋಜಿಸಲಾದ ‘ಡೈಮಂಡ್ ಫೆಸ್ಟ್’ ಕಾರ್ಯಕ್ರಮವು ಅತ್ಯಂತ ವೈಭವದಿಂದ ಜರುಗಿತು.ಕಾರ್ಯಕ್ರಮದ ಆರಂಭದಲ್ಲಿ ಮುಳಿಯ ಸಂಸ್ಥೆಯ ವ್ಯವಸ್ಥಾಪಕ ಲೋಹಿತ್ ಕುಮಾರ್ ಸ್ವಾಗತಿಸಿದರು.



ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಪತ್ ಪಿ. ಸುವರ್ಣ, ಡಾ. ವಿನಯ್ ಕಿಶೋರ್, ಮಾರ್ಕೆಟಿಂಗ್ ಕನ್ಸಲ್ಟೆಂಟ್ ವೇಣುಶರ್ಮ ಹಾಗೂ ಉಜಿರೆಯ ರೈಡಿಂಗ್ ಜೋಡಿ ದಂಪತಿಗಳು ದೀಪ ಪ್ರಜ್ವಲಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅತಿಥಿಗಳು, ಮುಳಿಯ ಸಂಸ್ಥೆಯ ಗುಣಮಟ್ಟ ಹಾಗೂ ಗ್ರಾಹಕರೊಂದಿಗಿನ ಬಾಂಧವ್ಯವನ್ನು ಶ್ಲಾಘಿಸಿ, ಡೈಮಂಡ್ ಫೆಸ್ಟ್ ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ಕನ್ನಿಕಾ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಮುಳಿಯ ಸಂಸ್ಥೆಯ ಸಿಬ್ಬಂದಿ ಕೃಷ್ಣಪ್ಪ ಧನ್ಯವಾದ ಸಮರ್ಪಿಸಿದರು. ಸಂಸ್ಥೆಯ ಸಿಬ್ಬಂದಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.









