







ಅಳದಂಗಡಿ: ಇಲ್ಲಿನ ಕೆದ್ದು ಪರಿಸರದಲ್ಲಿ ಮಾನಸಿಕ ಖಿನ್ನತೆಯಿಂದ ಮಹಿಳೆಯೋರ್ವರು ಮೂರು ದಿನಗಳಿಂದ ತಿರುಗಾಡುತ್ತಿದ್ದು, ಅಲ್ಲಲ್ಲಿ ಬೀದಿ ಬದಿಯಲ್ಲಿಮಲಗುತ್ತಿದ್ದರು. ಇದನ್ನು ಗಮನಿಸಿದ ಕೆದ್ದುವಿನಲ್ಲಿ ಫ್ಯಾನ್ಸಿ ಅಂಗಡಿ ಹೊಂದಿರುವ ಸಾಮಾಜಿಕ ಕಾರ್ಯಕರ್ತೆ ಹರಿಣಿ ಎಲ್ ಪೂಜಾರಿಯವರು ಮಾ.26ರರಂದು ವೇಣೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು.


ನಂತರ 112ಕರೆ ಮಾಡಿ ತಿಳಿಸಿದ್ದರಿಂದ 30 ನಿಮಿಷದೊಳಗೆ ಹೊಯ್ಸಳ ಪೊಲೀಸರು ಸ್ಥಳಕ್ಕೆ ಬಂದು ಸಂತ್ರಸ್ತೆಗೆ ತುರ್ತು ಚಿಕಿತ್ಸೆ ಅಗತ್ಯವಿರುವುದರಿಂದ ಕೂಡಲೇ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ.
ಶಿರ್ಲಾಲು ಗ್ರಾಮದ ಪಂಚಾಯತ್ ನ ಮಾಜಿ ಅಧ್ಯಕ್ಷೆ ಗುಣಮ್ಮ ಹಾಗೂ ಸ್ಥಳೀಯರು ಸಹಕರಿಸಿದರು. ಹೊಯ್ಸಳ ಪೊಲೀಸ್ ಸಿಬ್ಬಂದಿ ಬಸವರಾಜ್ ಎಸ್ , ಸಿರಾಜುದ್ದೀನ್ ಸಹಕರಿಸಿದರು.









