ಕಳೆಂಜದಲ್ಲಿ ಕೋಳಿ ಅಂಕಕ್ಕೆ ಪೊಲೀಸರ ದಾಳಿ: ಸ್ಥಳದಲ್ಲೇ ಕೋಳಿಗಳನ್ನು ಬಿಟ್ಟು ಪರಾರಿ

0

ಕಳೆಂಜ: ಗ್ರಾಮದ ಮುರದ ಮೇಲು ಪ್ರದೇಶದಲ್ಲಿ ಮುಂಜಾನೆ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಧರ್ಮಸ್ಥಳ ಪೊಲೀಸರು ದಾಳಿ ನಡೆಸಿದ ಘಟನೆ ಮಾ. 27ರಂದು ನಡೆದಿದೆ.ಮುರದ ಮೇಲು ಪ್ರದೇಶದಲ್ಲಿ ನಡೆದಿದ್ದ ಗ್ರಾಮದ ನೇಮೋತ್ಸವದ ಹಿನ್ನೆಲೆ ಕೋಳಿ ಅಂಕವನ್ನು ಏರ್ಪಡಿಸಲಾಗಿತ್ತು ಎಂದು ತಿಳಿದು ಬಂದಿದೆ.

ಆದರೆ, ಈ ಕೋಳಿ ಅಂಕಕ್ಕೆ ಯಾವುದೇ ಪೊಲೀಸ್ ಅನುಮತಿ ಇಲ್ಲದೆ ಇರುವ (ನಿಷೇಧ) ಹಿನ್ನೆಲೆಯಲ್ಲಿ, ಮಾಹಿತಿ ಪಡೆದ ಬೀಟ್ ಪೊಲೀಸ್ ಮಲ್ಲಿಕಾರ್ಜುನ್ ಹಾಗೂ ಇತರ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ದಾಳಿ ನಡೆಸಿದರು.ಪೊಲೀಸರು ದಾಳಿ ನಡೆಸುತ್ತಿದ್ದಂತೆಯೇ ಕೋಳಿ ಅಂಕದಲ್ಲಿ ತೊಡಗಿದ್ದವರು ಸ್ಥಳದಲ್ಲೇ ಕೋಳಿಗಳು ಹಾಗೂ ಬೈಕ್‌ಗಳನ್ನು ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕ ಏರ್ಪಡಿಸಿದವರಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here