ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅಂಬಿಕಾ ರವರ ಬದುಕಿಗೊಂದು ನೆಮ್ಮದಿಯ ಸೂರು

0

ಕಳೆಂಜ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಿ)ಬೆಳ್ತಂಗಡಿ ತಾಲೂಕು ವತಿಯಿಂದ ಡಾ.ಶ್ರೀ ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ, ಹೇಮಾವತಿ ಅವರ ಕನಸಿನ ಕಾರ್ಯಕ್ರಮವಾದ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ವಲಯದ ಕಳೆಂಜ ಎ ಕಾರ್ಯಕ್ಷೇತ್ರದ ಕಾಯರ್ತಡ್ಕ ಮಾಣಿಗೇರಿಯಲ್ಲಿ ಈಗಾಗಲೇ ಪ್ರತಿ ತಿಂಗಳು ಮಾಶಾಸನವನ್ನು ಪಡೆಯುತ್ತಿರುವ ವಾತ್ಸಲ್ಯ ಸದಸ್ಯರಾದ ಅಂಬಿಕಾರವರ ವಾತ್ಸಲ್ಯ ಮನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಯಶೋಧರ ಕೆ ಹಸ್ತಾಂತರಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ದಿ ಯೋಜನೆಯ ಮೂಲಕ ಮಾಶಾಸನ ನೀಡುತ್ತಿರುವ ಸದಸ್ಯರಿಗೆ ಕರೋನ ಸಂದರ್ಭದಲ್ಲಿ ಕಾರ್ಯಕರ್ತರ ಮೂಲಕ ಮಾಶಾಸನವನ್ನು ಮನೆಗೆ ತಲುಪಿಸಿದ ಸಂದರ್ಭ ಕಾರ್ಯಕರ್ತರು ತೆಗೆದ ಪೋಟೋದಲ್ಲಿ ಮನೆಯ ಪರಿಸ್ಥಿತಿಯನ್ನು ಗಮನಿಸಿದ ಹೇಮಾವತಿ ಅವರು ಯಾವುದೇ ಒಬ್ಬ ವ್ಯಕ್ತಿಗೆ ಆಹಾರ ಹೇಗೆ ಮುಖ್ಯವೋ ಅದೇ ರೀತಿ ವಾಸಕ್ಕೊಂದು ಸೂರು ಕೂಡ ಮುಖ್ಯವಾಗಿರುತ್ತದೆ ಎಂಬ ಅವರ ಸಂಕಲ್ಪದಂತೆ ವಾತ್ಸಲ್ಯ ಮನೆ ನಿರ್ಮಿಸಿ ಕೊಡುವ ಯೋಜನೆಯನ್ನು ರೂಪಿಸಿ ವಾತ್ಸಲ್ಯ ಮನೆ ನಿರ್ಮಿಸಿ ಅವರ ಬದುಕಿಗೆ ಬೆಳಕನ್ನು ನೀಡಿದ್ದು ವಾಸಕ್ಕೆ ಯೋಗ್ಯವಾದ ಸೂರಿಲ್ಲದ ಅಂಬಿಕಾ ರವರ ಮನೆಯನ್ನು ಗುರುತಿಸಿ,ಇಂದು ಸುಂದರವಾದ ಮನೆಯನ್ನು ಯೋಜನೆಯ ವತಿಯಿಂದ ನಿರ್ಮಿಸಿಕೊಡಲಾಗಿದೆ.

ಈ ಮನೆಯನ್ನು ಸಂತೋಷದಿoದ ಹಸ್ತಾಂತರಿಸಿ ಈ ಮನೆಯಲ್ಲಿ ಅಂಬಿಕಾರವರು ಉತ್ತಮ ರೀತಿಯಲ್ಲಿ ಬಾಳಿ ಬದುಕುವಂತೆ ಶುಭ ಹಾರೈಸಿದರು. ಜನಜಾಗೃತಿ ವಲಯಾಧ್ಯಕ್ಷ ರಾಜೇಶ್ M K ಹೇಮಾವತಿ ಹೆಗ್ಗಡೆ ಯವರು ವಾತ್ಸಲ್ಯ ಕಾರ್ಯಕ್ರಮದ ಮೂಲಕ ನಿರ್ಗತಿಕರ ಪಾಲಿಗೆ ನೆರವಾಗುತ್ತಿದ್ದು ಈ ಕಾರ್ಯಕ್ರಮ ನಮ್ಮ ಗ್ರಾಮದ ಸದಸ್ಯರಿಗೆ ದೊರೆತಿರುವುದಕ್ಕಾಗಿ ಸಂತಸ ವ್ಯಕ್ತಪಡಿಸಿದರು. ಇದೊಂದು ಅರ್ಥಪೂರ್ಣವಾದ ಕಾರ್ಯಕ್ರಮವಾಗಿದ್ದು ಈ ಕಾರ್ಯಕ್ರಮದ ಮೂಲಕ ಅದೆಷ್ಟೋ ನಿರ್ಗತಿಕರು ಬದುಕಿಗೆ ನೆಲೆಯನ್ನು ಕಂಡುಕೊಂಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ್ ಎಚ್,ಪಂಚಾಯತ್ ಸದಸ್ಯ ಹರೀಶ್ ಗೌಡ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಪ್ರಮೋದ ನಾಯರ್, ಬಜರಂಗದಳದ ಜಿಲ್ಲಾ ಸಂಚಾಲಕ ಗಣೇಶ್ ಮೀಯರು, ಭಜರಂಗದಳ ತಾಲೂಕು ಸಂಚಾಲಕ ಅಶೋಕ್, ಒಕ್ಕೂಟದ ಅಧ್ಯಕ್ಷ ಧರ್ಣಪ್ಪ ಕುಂಬಾರರವರು, ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸೇವಾ ಪ್ರತಿನಿಧಿಗಳಾದ ಜನಾರ್ಧನ್ , ರಿನಾಕ್ಷಿ, ಚೈತ್ರ ಗೀತಾ ರವರು, ಸ್ಥಳೀಯ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು .

ಕಾರ್ಯಕ್ರಮದಲ್ಲಿ ಮೇಲ್ವಿಚಾರಕ ರವೀಂದ್ರ ಬಿ ಸ್ವಾಗತಿಸಿ, ಜ್ಞಾನವಿಕಾಸ ಕಾರ್ಯಕ್ರಮದ ಸಮನ್ವಯಾಧಿಕಾರಿ ಮಧುರಾವಸಂತ್ ಧನ್ಯವಾದ ನೀಡಿದರು.

LEAVE A REPLY

Please enter your comment!
Please enter your name here