







ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಸಮ್ಮರ್ ಸ್ಪಾರ್ಕ್ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭ ನಡೆಯಿತು.ಈ ಸಮಾರಂಭದಲ್ಲಿ ಅತಿಥಿಗಳಾಗಿ ಅಖಿಲ ಕರ್ನಾಟಕ ಜನಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ವಿನ್ಸೆಂಟ್ ಪಾಯಸ್ ಅವರು ಆಗಮಿಸಿದ್ದರು.ಇವರು ಕಾರ್ಯಕ್ರಮವನ್ನು ದೀಪ ಉದ್ಘಾಟಿಸುವುದರ ಮೂಲಕ ಚಾಲನೆ ನೀಡಿದರು.


ಬಳಿಕ ಮಾತನಾಡಿದ ಅವರು ಬದುಕು ಸಣ್ಣದು.ಅದನ್ನು ರುಚಿಕರ ಮಾಡುವುದು ವಿದ್ಯಾರ್ಥಿಗಳಾದ ನಿಮ್ಮ ಕೈಲಿ ಇದೆ.ಉತ್ತಮ ಸಂಸ್ಕಾರ ಕೊಟ್ಟಷ್ಟು ಬದುಕು ಬೆಲೆ ಬಾಳುತ್ತದೆ.ಮಾದಕ ವ್ಯಸನಗಳು ಮಜಾ ಅಲ್ಲ ಅದು ಸಜಾ ಎಂದು ತಿಳಿಯಬೇಕು.ಶರೀರ ಎಂಬುದು ಒಂದು ಫ್ಯಾಕ್ಟರಿಯ ಹಾಗೆ .ಹೀಗಿರುವಾಗ ಆಹಾರ ನಮ್ಮನ್ನು ಉಳಿಸಿ ಬೆಳೆಸಿ ಶಕ್ತಿ ಕೊಡುವ ಹಾಗಿರ ಬೇಕು.ಮಕ್ಕಳ ಆಟ ಮನೆಯ ಜಗಲಿಯ ಮೇಲೆ ಇರಬೇಕು.ಮೊಬೈಲ್ನಲ್ಲಿ ಅಲ್ಲ.ಎಂಬಿತ್ಯಾದಿ ಹತ್ತು ಹಲವು ವಿದ್ಯಾರ್ಥಿಗಳ ಬದುಕಿಗೆ ಬೇಕಾದ ಅಮೂಲ್ಯ ವಿಚಾರಗಳನ್ನು ವಿಧ್ಯಾರ್ಥಿಗಳಿಗೆ ಹಲವು ಉದಾಹರಣೆಗಳ ಮೂಲಕ ವಿವರಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ನಾಟಕ ನಿರ್ದೇಶಕ ಯಶವಂತ್ ಬೆಳ್ತಂಗಡಿ ಉಪಸ್ಥಿತರಿದ್ದರು.ಭಾರ್ಗವಿ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ ವಿ ಸ್ವಾಗತಿಸಿ , ಅರ್ಘ್ಯ ಅತಿಥಿಗಳ ಕಿರುಪರಿಚಯ ಮಾಡಿ ಕಲ್ಪಿತ ಧನ್ಯವಾದವಿತ್ತರು. ಶಾಲಾ ವಿದ್ಯಾರ್ಥಿಗಳು ಹಾಗೂ ಶಾಲಾ ಶಿಕ್ಷಕ ವೃಂದ ಈ ಕಾರ್ಯಕ್ರಮಕ್ಕೆ ಸಾಕ್ಷಿಗಳಾದರು.









