







ಬೆಳಾಲು : ಬೆಳಾಲು ಕೃಷಿಪತ್ತಿನ ಸಹಕಾರಿ ಸಂಘದಲ್ಲಿ 2 ಕೋಟಿ ರೂಪಾಯಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ 2ನೇ ಆರೋಪಿ ಪ್ರಶಾಂತ್ ಎಂಬವರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸೊಸೈಟಿ ಸಿಬ್ಬಂದಿ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು.



ಸಹಕಾರಿ ಸಂಘದಲ್ಲಿ 2022ರ ಫೆ. 18ರಿಂದ 2025ರ ಮಾ. 25ರ ನಡುವೆ 2,12,08,328.15 ರೂ.ಗಳನ್ನು ಸಿಬಂದಿಗಳಾದ ಬೆಳಾಲು ನಿವಾಸಿ ಎಲ್ಯಣ್ಣ ಪೂಜಾರಿ ಅವರ ಪುತ್ರ ಸದಾಶಿವ ಯಾನೆ ಸುಜಿತ್ ಮತ್ತು ಬೆಳಾಲು ನಿವಾಸಿ ವಾಸಪ್ಪ ಗೌಡ ಅವರ ಪುತ್ರ ಪ್ರಶಾಂತ ಬಿ. ಅವರು ವಿವಿಧ ಮೂಲಗಳಿಂದ ವಂಚನೆ ಮಾಡಿದ್ದರು ಎನ್ನಲಾಗಿದೆ. ಪ್ರಶಾಂತ ಬಿ. ಸಂಘದ ಠೇವಣಿಯ ರಶೀದಿಯನ್ನು ಕಳವು ಮಾಡಿದ್ದ ಎಂದು ಸಂಘದ ಅಧ್ಯಕ್ಷ ಪದ್ಮಗೌಡ ಅವರು ದೂರು ನೀಡಿದ್ದರು.
ಈ ದೂರಿನ ಅನ್ವಯ ಧರ್ಮಸ್ಥಳ ಠಾಣೆಯಲ್ಲಿ ಸದಾಶಿವ ಯಾನೆ ಸುಜಿತ್, ಪ್ರಶಾಂತ ಬಿ. ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ. ಸದಾಶಿವ ಯಾನೆ ಸುಜಿತ್‌ರನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಆದರೆ, ಪ್ರಶಾಂತ್ ತಲೆಮರೆಸಿಕೊಂಡಿದ್ದ. ಈಗ ಪೊಲೀಸರು ಆತನನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.









