






ಉಜಿರೆ : ಉಜಿರೆಯ ಶ್ರೀ ಜನಾರ್ಧನ ದೇವಸ್ಥಾನದ ರಥಬೀದಿ ಅಪರೂಪದ ಸಂಭ್ರಮಕ್ಕೆ ಸಾಕ್ಷಿಯಾಯಿತು. ಆಳ್ವಾಸ್ ನುಡಿಸಿರಿ ವಿರಾಸತ್ ಬೆಳ್ತಂಗಡಿ ಘಟಕದ ವತಿಯಿಂದ ಆಯೋಜಿಸಲಾದ “ಆಳ್ವಾಸ್ ನುಡಿಸಿರಿ” ಕಾರ್ಯಕ್ರಮ ದಲ್ಲಿ 500 ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಸಾಂಸ್ಕೃತಿಕ ವೈಭವ ಸಾಹಿತ್ಯ ಮತ್ತು ಸಂಸ್ಕೃತಿಯ ಅದ್ಭುತ ಸಮ್ಮಿಲನ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮಕ್ಕೆ ಜನಸಾಗರ ಹರಿದುಬಂದಿತು.
ಕಲಾಸಕ್ತರು ಸಾಹಿತ್ಯಾಸಕ್ತರು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲ ವಯೋಮಾನದ ಜನರು ಉತ್ಸಾಹದಿಂದ ಭಾಗವಹಿಸಿ, ರಥಬೀದಿಯನ್ನು ಸಂಭ್ರಮದ ಕೇಂದ್ರವನ್ನಾಗಿಸಿದರು. ಪ್ರತಿಯೊಂದು ಮುಖದಲ್ಲೂ ಕಾಣಿಸಿದ ಸಂತೋಷ ಮತ್ತು ಭಕ್ತಿಭಾವ ಕಾರ್ಯಕ್ರಮದ ವೈಶಿಷ್ಟ್ಯತೆಯನ್ನು ಇನ್ನಷ್ಟು ಹೆಚ್ಚಿಸಿತು. ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ರಥ ಬೀದಿಯಲ್ಲಿ ಕೀರ್ತಿಶೇಷ ಯು. ವಿಜಯ ರಾಘವ ಪಡ್ವೆ ಟ್ನಾ ಯ ವೇದಿಕೆಯಲ್ಲಿ ಬೆಳ್ತಂಗಡಿ ಘಟಕದ ಶಶಿಧರ ಶೆಟ್ಟಿ ನವಶಕ್ತಿ ಉದ್ಯಮಿಗಳು ಮತ್ತು ಮೋಹನ್ ಕುಮಾರ್ ಕನಸಿನ ಮನೆ ಉಜಿರೆ ಯವರ ನೇತೃತ್ವದಲ್ಲಿ ಮತ್ತು ಉಜಿರೆ ಕ್ಷೇತ್ರದ ಅನುವಂಶೀಯ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆ ಟ್ನಾ ಯ ರ ಮಾರ್ಗದರ್ಶನದಲ್ಲಿ ಆಯೋಜಿಸಲ್ಪಟ್ಟ ಕಾರ್ಯಕ್ರಮವೂ ಶಿಸ್ತಿನಿಂದ ಹಾಗೂ ಸಮರ್ಪಕವಾಗಿ ನಿರ್ವಹಿಸಲ್ಪಟ್ಟಿತು.


ವೇದಿಕೆ ವಿನ್ಯಾಸ, ಕಾರ್ಯಕ್ರಮದ ಕ್ರಮಬದ್ಧ ನಿರ್ವಹಣೆ ಎಲ್ಲವೂ ಸಂಘಟಕರ ಸಮರ್ಪಣೆ ಮತ್ತು ನಿಷ್ಠೆಯನ್ನು ಪ್ರತಿಬಿಂಬಿಸಿತು. ಯಾವುದೇ ಅಡಚಣೆ ಇಲ್ಲದೆ ಕಾರ್ಯಕ್ರಮ ಯಶಸ್ವಿಯಾಗಿ ಸಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದ ವಿವಿಧ ಸಾಂಸ್ಕೃತಿಕ ಅಂಶಗಳು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಸಂಸ್ಕೃತಿಯ ಸುಂದರ ಮೇಳದಲ್ಲಿ ಪ್ರತಿಯೊಂದು ಕ್ಷಣವೂ ವಿಶೇಷವಾಗಿದ್ದು, ಪಾಲ್ಗೊಂಡ ಪ್ರತಿಯೊಬ್ಬರ ಮನದಲ್ಲಿ ಅಚ್ಚಳಿಯದ ನೆನಪುಗಳನ್ನು ಮೂಡಿಸಿತು.ಸ್ಥಳೀಯರ ಸಹಕಾರ ಮತ್ತು ಸಂಘಟಕರ ದೃಢನಿಶ್ಚಯ ಈ ಮಹೋತ್ಸವದ ಯಶಸ್ಸಿಗೆ ಪ್ರಮುಖ ಕಾರಣಗಳಾಗಿವೆ.
“ಇಂತಹ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿಯನ್ನು ಜೀವಂತವಾಗಿರಿಸುತ್ತವೆ” ಎಂಬ ಮಾತುಗಳು ಅಲ್ಲಿದ್ದವರ ಮನದಾಳದ ಭಾವನೆಗಳನ್ನು ವ್ಯಕ್ತಪಡಿಸಿತು.ಒಟ್ಟಾರೆ, ಉಜಿರೆಯಲ್ಲಿ ನಡೆದ “ನುಡಿಸಿರಿ” ಕಾರ್ಯಕ್ರಮವು ದೇಶದ ಸಾಂಸ್ಕೃತಿಕ ಗರಿಮೆಯನ್ನು ಸಾರುವ ಮಹೋತ್ಸವವಾಗಿ ಮೂಡಿ ಬಂದು, ಜನಮನಗಳಲ್ಲಿ ದೀರ್ಘಕಾಲ ಉಳಿಯುವಂತಹ ಸ್ಮರಣೀಯ ಕ್ಷಣಗಳನ್ನು ಉಣಬಡಿಸಿತು.









