







ಆರಂಬೋಡಿ: ಗ್ರಾಮದ ಹುಲಿಮೇರು ಮನೆತನದ ಅತೀ ಹಿರಿಯ ಜೀವ ನಾಟಿ ವೈದ್ಯೆ ಸೀತು ಪೂಜಾರ್ತಿ (97) ಮಾರ್ಚ್ 23ರಂದು ಸೋಮವಾರ ಬೆಳ್ಳಗೆ ಅವರ ಸ್ವಗೃಹದಲ್ಲಿ ನಿಧನರಾದರು.


ಮೃತರು ಮೂರು ಗಂಡು, 4ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಇವರು ನಾಟಿ ವೈದ್ಯೆಯಾಗಿ ಹೆಸರುವಾಸಿಯಾಗಿದ್ದು ದಮ್ಮು, ಉಬ್ಬಸ ಮುಂತಾದ ಹಲವಾರು ಕಾಯಿಲೆಗಳಿಗೆ ಉಚಿತವಾಗಿ ಮದ್ದು ನೀಡುತಿದ್ದರು. ಇವರ ಅಂತ್ಯಕ್ರಿಯೆಯೂ ಸೋಮವಾರ ಸಂಜೆ 4ಗಂಟೆಗೆ ಅವರ ಸ್ವಗೃಹದಲ್ಲಿ ನಡೆಸಲಾಗುವುದು ಎಂದು ಕುಟುಂಬದ ಮೂಲದಿಂದ ತಿಳಿದು ಬಂದಿದೆ.









