ಕೋಮು ಪ್ರಚೋದನೆಯ ಪೋಸ್ಟ್: ಬೆಳ್ತಂಗಡಿಯ ಯುವತಿ ಅರೆಸ್ಟ್

0

ಬೆಳ್ತಂಗಡಿ: ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆಯ ಪೋಸ್ಟ್ ಗಳನ್ನು ಹಾಕಿದ ಆರೋಪದಡಿ ಬೆಳ್ತಂಗಡಿಯ ಯುವತಿಯೊಬ್ಬಳನ್ನು ಬಂಧಿಸಲಾಗಿದೆ‌‌.

ಮಂಗಳೂರು ನಗರದ ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ 2025 ನೇ ಸಾಲಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ ಮಾಡುವಂತಹ ಪೋಸ್ಟ್ ಗಳನ್ನು ಹಂಚಿಕೊಂಡು ಪ್ರಚಾರ ಮಾಡಿದ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣಾ ಯಲ್ಲಿ ಕಲಂ 353 (1), 353(2), 61 (2), 55 ಬಿ.ಎನ್.ಎಸ್. 2023 ರಂತೆ ಪ್ರಕರಣ ದಾಖಲಾಗಿತ್ತು.ಸಾಮಾಜಿಕ ಜಾಲತಾಣದಲ್ಲಿ “Terrorism has religion and so called Terrorists too. Its Islam” ಎಂದೂ ಮತ್ತು ಇದೇ ರೀತಿಯ ಕೆಲವು ಫೋಸ್ಟ್ ಗಳನ್ನು ಬೆಳ್ತಂಗಡಿ ತಾಲೂಕಿನ ಯುವತಿಯೊಬ್ಬಳು ಹಂಚಿಕೊಂಡ ಬಗ್ಗೆ ತನಿಖೆಯಲ್ಲಿ ಕಂಡು ಬಂದಿತ್ತು.

ಮಾ.19 ರಂದು ಆರೋಪಿತ ಯುವತಿಯನ್ನು ದಸ್ತಗಿರಿಗೆ ಒಳಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಮೊಬೈಲ್ ಮತ್ತು ಪೋಸ್ಟ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿತೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here