






ನಾವೂರು ಗ್ರಾಮ ಪಂಚಾಯತ್‌ನ 2025-26ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆಯ ಮಾ.17 ರಂದು ನಾವೂರು ದ. ಕ. ಜಿ ಪಂ. ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ನಡೆಯಿತು.


ಪಂಚಾಯತ್ ನೋಡೆಲ್ ಅಧಿಕಾರಿಯಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಪ್ರಿಯಾ ಅಗ್ನಿಶ್ವಹಿಸಿ ಸಭೆಯನ್ನು ಮುನ್ನಡೆಸಿದರು, ಸಭೆಯ ಅಧ್ಯಕ್ಷತೆಯನ್ನು ಸಹಾಯಕ ಕಾರ್ಯಪಾಲಕ ಅಭಿಯಂತರರು, ಪಂ.ರಾಜ್ ಇಂಜಿನಿಯರಿಂಗ್ ಉಪವಿಭಾಗ ಮತ್ತು ಪಂಚಾಯತ್ ಆಡಳಿತ ಅಧಿಕಾರಿ ಜನಾರ್ದನ್ ಕೆ. ಬಿ, ವಹಿಸಿದ್ದರು, ಪಂಚಾಯತ್ ಮಾಜಿ ಅಧ್ಯಕ್ಷರು, ಸದಸ್ಯರು ಉಪಸ್ತಿತರಿದ್ದರು.ನಾವೂರು ಶಾಲಾ ಮಕ್ಕಳು ಪ್ರಾರ್ಥನೆ ಮಾಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಜೆ ಸ್ವಾಗತಿಸಿ, ಅನುಪಾಲನ ವರದಿ ಮತ್ತು ಜಮಾ ಖರ್ಚು ವಿವರವನ್ನು ಪ್ರಸ್ತಾಪಿಸಿದರು.









