






ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಬಿ. ಸಿ ಟ್ರಸ್ಟ್ ಗುರುವಾಯನಕೆರೆ ನಾರಾವಿ ವಲಯ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಾರಾವಿ ಸೂರ್ಯ ನಾರಾಯಣ ದೇವಸ್ಥಾನದ ನೂತನ ಸಭಾಭವನಕ್ಕೆ 2,00,000 ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಕ್ಷೇತ್ರದಿಂದ ಹೊರೆಕಾಣಿಕೆಯಾಗಿ ವಸ್ತು ರೂಪದಲ್ಲಿ 30 ಕ್ವಿಂಟಾಲ್ ಅಕ್ಕಿ ಮತ್ತು 1 ಲೋಡ್ ತರಕಾರಿ ಕ್ಷೇತ್ರದ ವತಿಯಿಂದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ 200000 ದ ಮಂಜೂರಾತಿ ಪತ್ರವನ್ನು ತಾಲೂಕು ಯೋಜನಾಧಿಕಾರಿ ಅಶೋಕ್ ಬಿ ಇವರು ನಾರಾವಿ ಸೂರ್ಯ ನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ರವೀಂದ್ರ ಪೂಜಾರಿ ಇವರಲ್ಲಿ ಹಸ್ತಾಂತರ ಮಾಡಿದರು.


ಕ್ಷೇತ್ರದಿಂದ 400000 ಸಹಾಯಧನ ಸೂರ್ಯನಾರಾಯಣ ದೇವಸ್ಥಾನ ಕ್ಕೆ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆ ಅವರು ನೀಡಿದ್ದಾರೆ.
ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿನಯ್ ಹೆಗ್ಡೆ , ತಾಲೂಕು ಕೇಂದ್ರ ಒಕ್ಕೂಟದ ಅಧ್ಯಕ್ಷ ಸದಾನಂದ ಬಂಗೇರ, ನಾರಾವಿ ವಲಯದ ವಲಯಾಧ್ಯಕ್ಷ ಶೇಖರ್ ಹೆಗ್ಡೆ, ಕಾರ್ಕಳ ತಾಲೂಕು ಜನಜಾಗೃತಿ ಸದಸ್ಯ ನಾರಾಯಣ ಪೂಜಾರಿ, ದೇವಸ್ಥಾನದ ಆಡಳಿತ ಕಮಿಟಿಯ ಸದಸ್ಯರಾದ ಜಗದೀಶ್ ಹೆಗ್ಡೆ, ಮತ್ತು ಲಕ್ಷ್ಮಣ ಬಂಗೇರ , ನಾರಾವಿ ವಲಯದ ಮೇಲ್ವಿಚಾರಕ ವಿಶಾಲ ಕೆ, ಸದಸ್ಯ ವಸಂತ ಪೂಜಾರಿ ,ಸೇವಪ್ರತಿನಿಧಿಗಳಾದ ರೇಷ್ಮಾ,ಹರಿಣಾಕ್ಷಿ, ಶಶಿಕಲಾ ದೇವಸ್ಥಾನ ಸಿಬ್ಬಂದಿ ಪ್ರಸಾದ್ ದೇವಸ್ಥಾನ ಅರ್ಚಕ ವೃಂದ ಉಪಸ್ಥಿತರಿದ್ದರು.









