






ಕುವೆಟ್ಟು; ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಮದ್ದಡ್ಕ ಇದರ ವತಿಯಿಂದ ಮದ್ದಡ್ಕ ತಾಯಿ ರಕ್ತೇಶ್ವರಿ ಹಾಗೂ ಪಿಲಿಚಾಮುಂಡಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ರೂ1 ಲಕ್ಷ ರೂಪಾಯಿ ದೇಣಿಗೆಯನ್ನು ಮಾ 12 ರoದು ದೈವಸ್ಥಾನದಲ್ಲಿ ನಡೆದ ದೈವಗಳ ಪ್ರತಿಷ್ಠೆ ಹಾಗೂ ಸಾನಿಧ್ಯ ಕಳಸ ಮಹೋತ್ಸವದಂದು ನೀಡಲಾಯಿತು.



ಗಣೇಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ದಾಮೋದರ್ ಕುಂದರ್ ಸಬರಬೈಲು, ಟಿ ಕೃಷ್ಣ ರೈ ಸಬರಬೈಲು, ಪ್ರಧಾನ ಕಾರ್ಯದರ್ಶಿ ಅನುಪ್ ಎo ಬಂಗೇರ, ಗಣೇಶೋತ್ಸವ ಕಾರ್ಯಕ್ರಮದ ಸಂಘಟಕರಾದ ಚಂದ್ರಹಾಸ ಕೇದೆ, ಕ್ರೀಡಾ ಕಾರ್ಯದರ್ಶಿ ಹರೀಶ್ ಕೋಟ್ಯಾನ್ ಮದ್ದಡ್ಕ, ಸಮಿತಿಯ ಮಾಜಿ ಅಧ್ಯಕ್ಷ ಉಮೇಶ್ ಕುಮಾರ್ ಮದ್ದಡ್ಕ. ಉಪಸ್ಥಿತರಿದ್ದರು.










