ಉಜಿರೆ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ವಿದ್ಯಾ ಪ್ರಸನ್ನ ಶ್ರೀ, ಸೋದೆ ಮಠ ವಿಶ್ವವಲ್ಲಭ ತೀರ್ಥರಿಂದ ಆಶೀರ್ವಚನ ಧರ್ಮಯಾನ ಶೋಭಯಾತ್ರೆ ಗೌರವಾರ್ಪಣೆ

0

ಉಜಿರೆ : ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಕೊನೆಯ ದಿನ ಮಾ. 11.ರಂದು ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಉಡುಪಿ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಯವರ ಉಪಸ್ಥಿತಿಯಲ್ಲಿ ಜರಗುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ. ಪ್ರತಾಪ ಸಿಂಹ ನಾಯಕ್ ವಹಿಸಿದ್ದರು.ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶಶಿಧರ ಶೆಟ್ಟಿ ಬರೋಡ, ಶಾಸಕ ಹರೀಶ್ ಪೂಂಜ, ಮೆಸ್ಕಾಂ ಜಿಲ್ಲಾ ಅಧ್ಯಕ್ಷ ಕೆ. ಹರೀಶ್ ಕುಮಾರ್, ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಹಿಂಜಾಡಿ, ಬೆಂಗಳೂರು ಉದ್ಯಮಿ ತ್ರಿವಿಕ್ರಮ ಸಪಲ್ಯ,ಬ್ರಹ್ಮರಥದ ದಾನಿ ಕಿರಣ್ ರಾವ್ ಅಮೇರಿಕಾ, ಕುಸುಮ ಪಡುವೆಟ್ನಾಯ,ವೃಂದಾ ಪಡುವೆಟ್ನಾಯ, ಲೀಲಾವತಿ ರಾಜು ಮೇಸ್ತ್ರಿ, ಉಪಸ್ಥಿತರಿದ್ದರು.ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿ, ಪ್ರದಾನ ಅರ್ಚಕ ಶ್ರೀನಿವಾಸ್ ಹೊಳ್ಳ, ಬ್ರಹ್ಮವಾಹಕ ವೆಂಕಟರಾಜ ಹೆಬ್ಬಾರ್,ನಾಗೇಂದ್ರ ಭಾರಧ್ವಜ, ಬೆಂಗಳೂರು ಸಮಿತಿ ಸಂಚಾಲಕ ಮಂಜುನಾಥ ಕನ್ಯಾಡಿ, ಮಹಾದೇವ ಮೂರ್ತಿ ಬೆಂಗಳೂರು, ವೇದಮೂರ್ತಿ ಬಾಲಕೃಷ್ಣ ಹೊಳ್ಳ, ಪ್ರವೀಣ್ ಕುಮಾರ್ ಇಂದ್ರ,, ಕೆ.ಮೋಹನ್ ಕುಮಾರ್ ಅಮ್ಮಿ ಪೂಜಾರಿ ಪಾರ ಇವರಿಗೆ ಗೌರವಾರ್ಪಣೆ ನಡೆಯಿತು.ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ಸ್ವಾಗತಿಸಿದರು.

ಉಪನ್ಯಾಸಕ‌ ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರೂಪಿಸಿದರು.ಪ್ರಧಾನ ಸಂಚಾಲಕ ಮೋಹನ್ ಕುಮಾರ್ ವಂದಿಸಿದರು.ಸಮಗ್ರ ಭಜನಾ ತಂಡಗಳ ಸದಸ್ಯರು ಪ್ರಾರ್ಥನೆ ಗೈದರು. ಉಜಿರೆಯ ಶ್ರೀ ಡಿ.ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಿಂದ ದೇವಸ್ಥಾನದವರೆಗೆ ‘ಧರ್ಮಯಾನ’ ಶೋಭಾಯಾತ್ರೆ ನಡೆಯಿತು.ಇದರಲ್ಲಿ ಸಹಸ್ರಾರು ಭಕ್ತರ ಜತೆ ಅಂತರಾಜ್ಯ ಕಲಾತಂಡಗಳ ಒಂದು ಸಾವಿರಕ್ಕೂ ಮಿಕ್ಕಿದ ಕಲಾವಿದರು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here