






ಧರ್ಮಯಾನ ಶೋಭಾಯಾತ್ರೆ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಭಾಷಣಬ್ರಹ್ಮಕಲಶೋತ್ಸವ ಅತ್ಯಂತ ಯಶಸ್ವಿಯಾಗಿದೆ ಎಂದು ಸಂತೋಷದಿಂದ ಹೇಳುತ್ತೇನೆ. ಬಹಳ ವಿಜೃಂಭಣೆಯಿಂದ, ಸ್ಮರಣೀಯವಾಗಿ, ಕಾಲಕಾಲಕ್ಕೂ ನೆನಪಿಟ್ಟುಕೊಳ್ಳುವಂತೆ ಕಾರ್ಯಕ್ರಮ ನಡೆದಿದೆ. ಇದಕ್ಕೆ ಕಾರಣಕರ್ತರಾದ ಎಲ್ಲರೂ ಅಭಿನಂದನಾರ್ಹರು. ಜನಾರ್ದನ ಸ್ವಾಮಿಯ ಸೇವೆಯನ್ನು ನೀವು ನಿಮ್ಮ ನಿಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ಮಾಡಿದ್ದೀರಿ. ಬ್ರಹ್ಮರಥವನ್ನು ಒಪ್ಪಿಸಿದ್ದಾರೆ. ನಮಗೆ ಹೊಸ ಕಾರು ಬಂದರೆ ಹೇಗೆ ಸಂಭ್ರಮ ಪಡುತ್ತೇವೆಯೋ ಹಾಗೆಯೇ ನನಗೆ ಹೊಸ ಬ್ರಹ್ಮರಥ ಬಂದಿದೆ ಎಂದು ಜನಾರ್ದನ ಸ್ವಾಮಿಗೂ ಖುಷಿಯಾಗಿರಬಹುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

ಧರ್ಮಯಾನ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ಬಂದವರಿಗೆ ಅನ್ನದಾನ, ಪಾನಕ ಸೇವೆ ಮಾಡಿದ್ದೀರಿ. ಭಗವಂತ ಕೂಡ ಸಂತೃಪ್ತನಾಗಿದ್ದಾನೆ. ವಿಜಯಗೋಪುರ ಅತ್ಯಂತ ಆಕರ್ಷಕವಾಗಿದೆ. ಗೋಪುರಕ್ಕೆ ಪೌಳಿ ಕಳೆ ಕೊಟ್ಟಿದೆ. ಶರತ್ಕೃಷ್ಣ ಪಡ್ವೆಟ್ನಾಯರನ್ನೂ ನಾನು ಅಭಿನಂದಿಸುತ್ತೇನೆ. ಉದ್ಯಮಿಗಳಾದ ಶಶಿಧರ ಶೆಟ್ಟಿ ಬರೋಡ, ಮೋಹನ್ ಕುಮಾರ್ ಅವರ ಸೇವೆಗಳನ್ನೂ ಮೆಚ್ಚಬೇಕು. ಭಗವಂತನನ್ನು, ಉಜಿರೆ ಕ್ಷೇತ್ರವನ್ನು ವೈಭವೀಕರಿಸಿದ ಕಾರ್ಯಕ್ರಮವಿದು. ನಾನಾ ರೀತಿಯಿಂದ ಭಗವಂತನನ್ನು ಸ್ತುತಿಸಿ, ಪಠಿಸಿದ್ದೀರಿ. ಅನೇಕ ಸ್ವಾಮೀಜಿಗಳು ಬಂದು ಹರಸಿದ್ದಾರೆ. ಕ್ಷೇತ್ರ ಮತ್ತು ಸ್ವಾಮಿಯ ಕೀರ್ತಿ ಇನ್ನೂ ಹೆಚ್ಚಲಿ. ನಿತ್ಯವೂ ಭಕ್ತರು ದರ್ಶನಕ್ಕೆ ಬಂದು ಸ್ವಾಮಿಯ ಸೇವೆ ಮಾಡಬೇಕು.



ಮುಂದಿನ ಎಲ್ಲಾ ಕಾರ್ಯಕ್ರಮಗಳಲ್ಲೂ ಧರ್ಮಸ್ಥಳದ ಸಹಭಾಗಿತ್ವ ಮತ್ತು ಹರ್ಷೇಂದ್ರ ಕುಮಾರ್ ಅವರ ಸಹಕಾರ ನಿಮಗೆ ಇರಲಿದೆ ಎಂದು ಹೇಳಿದರು.ಧಾರ್ಮಿಕ ಸಭೆಯಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ, ಉಡುಪಿ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ. ಪ್ರತಾಪ ಸಿಂಹ ನಾಯಕ್ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶಶಿಧರ ಶೆಟ್ಟಿ ಬರೋಡ, ಶಾಸಕ ಹರೀಶ್ ಪೂಂಜ, ಮೆಸ್ಕಾಂ ಜಿಲ್ಲಾ ಅಧ್ಯಕ್ಷ ಕೆ. ಹರೀಶ್ ಕುಮಾರ್, ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಬೆಂಗಳೂರು ಉದ್ಯಮಿ ತ್ರಿವಿಕ್ರಮ ಸಪಲ್ಯ, ಬ್ರಹ್ಮರಥದ ದಾನಿ ಕಿರಣ್ ರಾವ್ ಅಮೇರಿಕಾ, ಕುಸುಮ ಪಡುವೆಟ್ನಾಯ, ವೃಂದಾ ಪಡುವೆಟ್ನಾಯ, ಲೀಲಾವತಿ ರಾಜು ಮೇಸ್ತ್ರಿ ಉಪಸ್ಥಿತರಿದ್ದರು. ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿ, ಪ್ರದಾನ ಅರ್ಚಕ ಶ್ರೀನಿವಾಸ್ ಹೊಳ್ಳ, ಬ್ರಹ್ಮವಾಹಕ ವೆಂಕಟರಾಜ ಹೆಬ್ಬಾರ್,ನಾಗೇಂದ್ರ ಭಾರಧ್ವಜ, ಬೆಂಗಳೂರು ಸಮಿತಿ ಸಂಚಾಲಕ ಮಂಜುನಾಥ ಕನ್ಯಾಡಿ, ಮಹಾದೇವ ಮೂರ್ತಿ ಬೆಂಗಳೂರು, ವೇದಮೂರ್ತಿ ಬಾಲಕೃಷ್ಣ ಹೊಳ್ಳ, ಪ್ರವೀಣ್ ಕುಮಾರ್ ಇಂದ್ರ,, ಕೆ.ಮೋಹನ್ ಕುಮಾರ್ ಅಮ್ಮಿ ಪೂಜಾರಿ ಪಾರ ಇವರಿಗೆ ಗೌರವಾರ್ಪಣೆ ನಡೆಯಿತು.ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ಸ್ವಾಗತಿಸಿದರು.

ಉಪನ್ಯಾಸಕ ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರೂಪಿಸಿದರು.ಪ್ರಧಾನ ಸಂಚಾಲಕ ಮೋಹನ್ ಕುಮಾರ್ ವಂದಿಸಿದರು.ಸಮಗ್ರ ಭಜನಾ ತಂಡಗಳ ಸದಸ್ಯರು ಪ್ರಾರ್ಥನೆಗೈದರು. ಉಜಿರೆಯ ಶ್ರೀ ಡಿ.ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಿಂದ ದೇವಸ್ಥಾನದವರೆಗೆ ‘ಧರ್ಮಯಾನ’ ಶೋಭಾಯಾತ್ರೆ ನಡೆಯಿತು. ಇದರಲ್ಲಿ ಸಹಸ್ರಾರು ಭಕ್ತರ ಜತೆ ಅಂತರಾಜ್ಯ ಕಲಾತಂಡಗಳ ಒಂದು ಸಾವಿರಕ್ಕೂ ಮಿಕ್ಕಿದ ಕಲಾವಿದರು ಭಾಗಿಯಾಗಿದ್ದರು









