ಕುತ್ರೊಟ್ಟು ಶ್ರೀ ಸತ್ಯನಾರಾಯಣ ದೇವಸ್ಥಾನ, ವರ್ಷಾವಧಿ ಜಾತ್ರೋತ್ಸವ ಸಂಪನ್ನ

0

ನಡ: ಗ್ರಾಮದ ಪೆರ್ಮಾಣು ಕುತ್ರೊಟ್ಟು ಶ್ರೀ ಸತ್ಯನಾರಾಯಣ ದೇವಸ್ಥಾನದ ವರ್ಷಾವಧಿ ಜಾತ್ರಾ ಉತ್ಸವವು ಫೆ.28ರಿಂದ ಮಾರ್ಚ್ 5ರವರೆಗೆ ನಡೆಯಿತು. ಕ್ಷೇತ್ರ ತಂತ್ರಿಗಳಾದ ವೇ| ಬ್ರಹ್ಮಶ್ರೀ ವಾದಿರಾಜ ಶಬರಾಯ ಓಡಲ ಅವರ ಪೌರೋಹಿತ್ಯದಲ್ಲಿ ಉತ್ಸವ ಸಮಿತಿ ಹಾಗೂ ಊರ ಪರವೂರ ಭಕ್ತರ ಸಹಕಾರದೊಂದಿಗೆ ಜರಗಿತು.

ಫೆ.28 ಬೆಳಿಗ್ಗೆ ಶುದ್ಧಿಕಲಶ ನವಕ ಪ್ರಧಾನ, ತೋರಣ ಮುಹೂರ್ತ, ಮಧ್ಯಾಹ್ನ ಊರವರಿಂದ ಹೊರೆಕಾಣಿಕೆ ಸಮರ್ಪಣೆ, ಮಧ್ಯಾಹ್ನ ಗಂಟೆ 12ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಗಂಟೆ 7ರಿಂದ ಧ್ವಜಾರೋಹಣ, ನಿತ್ಯಬಲಿ, ಮಹಾಪೂಜೆ ನಡೆಯಿತು.ಮಾ.1ನೇ ಬೆಳಿಗ್ಗೆ ಗಂಟೆ 8ರಿಂದ 108 ತೆಂಗಿನಕಾಯಿ ಗಣಹೋಮ, ಸಾಮೂಹಿಕ ಶನೈಶ್ಚರಪೂಜೆ 11.30ರಿಂದ ಪೂರ್ಣಾಹುತಿ ಮಹಾಪೂಜೆ, ದೇವರಿಗೆ ಮಹಾಪೂಜೆ, ರಾತ್ರಿ ಗಂಟೆ 7ರಿಂದ ಬಯನಬಲಿ ಉತ್ಸವ, ಕಟ್ಟೆಪೂಜೆ ನಂತರ ಸಾಂಸ್ಕೃತಿಕ ಕಾರ್ಯಕ್ರಮ, ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. ಮಾ. 2 ಬೆಳಿಗ್ಗೆ ಗಂಟೆ 7ರಿಂದ ದೀಪದ ಬಲಿ ಉತ್ಸವ, ನಿತ್ಯವಿಧಿ, ಮಧ್ಯಾಹ್ನ ಗಂಟೆ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಗಂಟೆ 7ರಿಂದ ಉತ್ಸವ ಹೊರಡು ಕಟ್ಟೆಪೂಜೆ, ಮಹಾಪೂಜೆ, ಭಜನಾ ಕಮ್ಮಟ ಸುತ್ತಮುತ್ತಲಿನ ಭಜನಾ ತಂಡಗಳಿಂದ ಕಾರ್ಯಕ್ರಮ ನಡೆಯಿತು.

ಮಾ.3 ಬೆಳಿಗ್ಗೆ ಗಂಟೆ 7ರಿಂದ ಉತ್ಸವ, ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ, ನಿತ್ಯವಿಧಿ, ನಾಗನಕಟ್ಟೆಯಲ್ಲಿ ಆಶ್ಲೇಷ ಬಲಿ, ನಾಗನಿಗೆ ತನುಪೂಜೆ ಮಧ್ಯಾಹ್ನ ಗಂಟೆ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಗಂಟೆ 6-3೦ರಿಂದ ಉತ್ಸವ, ರಾತ್ರಿ ಗಂಟೆ 7 ರಿಂದ ಬಂಡಾರ ಹೊರಡುವುದು ನಂತರ ಕಟ್ಟೆಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನೆರವೇರಿತು.

ರಾತ್ರಿ ಗಂಟೆ 8 ರಿಂದ ಹಾಸ್ಯ ವೈಭವ ಶ್ರೀ ಸುಂದರ ಬಂಗಾಡಿ ಮತ್ತು ತಂಡದವರಿಂದ ನಂತರ ಕ್ಷೇಮಕಲ್ಲ ಪಂಜುರ್ಲಿ ದೈವ ನೇಮೋತ್ಸವ ಭೂತಬಲಿ, ಶಯನ ಕವಾಟ ಬಂಧನ ನಡೆಯಿತು. ಮಾ.೦4 ಬೆಳಿಗ್ಗೆ ಗಂಟೆ 9-3೦ ಮೇಷ ಲಗ್ನ ಸುಮುಹೂರ್ತದಲ್ಲಿ ಕವಾಟೋದ್ಘಾಟನೆ, ನಿತ್ಯವಿಧಿ, ಮಹಾಪೂಜೆ ಸಂಜೆ ಗಂಟೆ 6-30ರಿಂದ ಉತ್ಸವ ಹೊರಟು ಅಂಗಣ ಪಿಲಿಚಾಮುಂಡಿ ದೈವದ ನೇಮ, ಕಟ್ಟೆಪೂಜೆ ದೇವರ (ಜಳಕ) ಸ್ನಾನ ಬಳಿಕ, ಧ್ವಜಾವರೋಹಣ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಕೇಶ್ವರಿ ಕುಟ್ನಾಯ ದೈವಗಳ ನೇಮೋತ್ಸವ ನಡೆಯಿತು. ಮಾ.5 ಬೆಳಿಗ್ಗೆ ಗಂಟೆ 6-30ರಿಂದ ಸಂಪ್ರೊಕ್ಷಣೆ, ನಿತ್ಯವಿಧಿ, ಮಹಾಪೂಜೆ, ಪ್ರಸಾದ ವಿತರಣೆ.ನಡೆಯಿತು

LEAVE A REPLY

Please enter your comment!
Please enter your name here