







ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.) ಅಳದಂಗಡಿ ಇದರ ವತಿಯಿಂದ ಸಂಘದ ಸುವರ್ಣ ಸಂಭ್ರಮ 2026ರ ಚಾಲನೆಯೊಂದಿಗೆ ಕಾಳು ಮೆಣಸು ಮತ್ತು ಕಾಫಿ ಬೆಳೆಯ ಕೃಷಿ ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮ ಮಾ: 15 ರಂದು ಅಳದಂಗಡಿ ಕಟ್ಟೂರು ಶಂಕರ ಭಟ್ ರವರ ತೋಟದಲ್ಲಿ ನಡೆಯಲಿದೆ.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ವಹಿಸಲಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ನಿರ್ದೇಶಕರು ದ.ಕ.ಜಿಲ್ಲಾ ಕುಶಾಲಪ್ಪ ಗೌಡ ಲೋಗೋ ಅನಾವರಣ ಮಾಡಲಿದ್ದಾರೆ, ಮಂಗಳೂರು ಮೆಸ್ಕಾಂ ಅಧ್ಯಕ್ಷರು ಕೆ. ಹರೀಶ್ ಕುಮಾರ್ ಕಾಫಿ ಗಿಡ ವಿತರಣೆ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಎಸ್.ಎಂ. ರಘು ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪುತ್ತೂರು, ಪ್ರತಿಮಾ ಬಿ. ವಿ. ಸಹಕಾರ ಅಭಿವೃದ್ಧಿ ಅಧಿಕಾರಿ ಬೆಳ್ತಂಗಡಿ, ಶಂಕರ ಭಟ್ ಕಟ್ಟೂರು ಪ್ರಗತಿಪರ ಕೃಷಿಕರು, ಉಪಸ್ಥಿತರಿದ್ದಾರೆ.ಸಂಪನ್ಮೂಲ ವ್ಯಕ್ತಿಗಳಾಗಿ : ಡಾ. ಶ್ರೀ ವೇಣುಗೋಪಾಲ್ ನಿವೃತ್ತ ಹಿರಿಯ ವಿಜ್ಞಾನಿಗಳು, ಐ.ಸಿ.ಎ.ಆರ್ ಆಗಮಿಸಲಿದ್ದಾರೆ.









