ಬೆಳ್ತಂಗಡಿ ಪಟ್ಟಣ ವ್ಯಾಪ್ತಿಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣದಿಂದ ಹಾಗೂ ಒಳ ಚರಂಡಿಯ ಅವೈಜ್ಞಾನಿಕ ನಿರ್ಮಾಣ; ಬೆಳ್ತಂಗಡಿ ವರ್ತಕರ ಸಂಘದಿಂದ ಸಚಿವರಿಗೆ ಮನವಿ

0

ಬೆಳ್ತಂಗಡಿಯ ವರ್ತಕರು ಒಟ್ಟು ಸೇರಿ ಸಂತೆಕಟ್ಟೆಯ ಅಯ್ಯಪ್ಪ ಟೆಂಪಲ್ ಎದುರುಗಡೆ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಇವರನ್ನು ಮಾ.3 ರಂದು ಭೇಟಿ ಮಾಡಿ ಪಟ್ಟಣದಲ್ಲಿ ಹಾದು ಹೋಗುವ ಸರ್ವಿಸ್ ರಸ್ತೆಯಿಂದಾಗುವ ತೊಂದರೆಗಳನ್ನು ವ್ಯಕ್ತ ಪಡಿಸಿದರು.

ಬೆಳ್ತಂಗಡಿ ಪಟ್ಟಣ ವ್ಯಾಪ್ತಿಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣದಿಂದ ಹಾಗೂ ಒಳ ಚರಂಡಿಯ ಅವೈಜ್ಞಾನಿಕ ನಿರ್ಮಾಣವು ವಾಹನಗಳ ಓವರ್ ಟೇಕಿಂಗ್ ಮತ್ತು ವೇಗದಿಂದ ಹಲವಾರು ರಸ್ತೆ ಆಫಘಾತಗಳು ಸಂಭವಿಸುತ್ತವೆ ಹಾಗೂ ಪಟ್ಟಣದ 100ಕ್ಕೂ ಅಧಿಕ ವ್ಯಾಪಾರಿ ಸಮುದಾಯಕ್ಕೆ ಬಹಳಷ್ಟು ಕಷ್ಟ ನಷ್ಟ ವನ್ನು ಉಂಟಾಗುವ ಪರಿಸ್ಥಿತಿ ಯನ್ನು ವ್ಯಕ್ತ ಪಡಿಸಿದರು.

ಈ ಮೊದಲೇ ನಮ್ಮ ಮನವಿಯನ್ನುಕೊಟ್ಟಿದ್ದೇವೆ ಆದರೂ ರಸ್ತೆ ಹಾಗೂ ರಸ್ತೆಯ ಮದ್ಯದಲ್ಲಿ ಚರಂಡಿ ಕೆಲಸ ನಡೆಯುತ್ತಾ ಇದೆ. ರಸ್ತೆ ಹಾಗೂ ಚರಂಡಿ ಕೆಲಸ ಸಂಪೂರ್ಣ ಗೊಂಡ ಸ್ಥಳದಲ್ಲಿ ಹಲವಾರು ಅಪಘಾತಗಳು ಹಾಗೂ ಟ್ರಾಫಿಕ್ ಜಾಮ್ ಶಾಲೆ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ರಸ್ತೆ ದಾಟಾಲು ಸಮಸ್ಯೆ ಆಗುತ್ತದೆ. ಈಗಾಗಲೆ ಹಲವಾರು ಅಂಗಡಿಗಳು ಮುಚ್ಚಲಾಗಿ ವೆ. ಆದ್ದರಿಂದ ತಾವು ದಯವಿಟ್ಟು ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಸರ್ವಿಸ್ ರಸ್ತೆಯನ್ನು ರದ್ದು ಮಾಡಿ ಇದ್ದ ಏಕ ರಸ್ತೆಯ ಬದಲಿಗೆ ಡ್ಯೂಯೆಲ್ ಕಾರೇಜ್ ನೊಂದಿಗೆ ರಸ್ತೆ ಯನ್ನು ಆಗಳಗೊಳಿಸಿ ಮದ್ಯದಲ್ಲಿ ವಿಭಜಕವನ್ನು ಅಳವಡಿಸಿ ರಸ್ತೆಯ ಎರಡು ಬದಿಯಲ್ಲಿ ಒಳಚರಂಡಿಯನ್ನು ನಿರ್ಮಾಣ ಮಾಡಲು ವಿನಂತಿಸಿದ್ದೇವೆ ಎಂದರು.

ವರ್ತಕ ಸಂಘದ ಅಧ್ಯಕ್ಷ ರೋನಾಲ್ಡ್ ಲೋಬೊ, ಉಪಾಧ್ಯಕ್ಷ ಶಶಿಧರ್ ಪೈ, ಕಾರ್ಯದರ್ಶಿ ಲಾನ್ಸಿ ಪಿರೇರ, ಉಪ ಕಾರ್ಯದರ್ಶಿ ಯಶವಂತ್ ಪತ್ವರ್ಧನ್, ಖಜಾಂಚಿ ಸುನೀಲ್ ಶೆನೋಯ್, ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ ಸಮಿತಿ ಸದಸ್ಯರಾದ ವಿಲ್ಸನ್ ಗೊನ್ಸಲ್ವಿಸ್,ಜೂಡ್ ಲೋಬೊ, ವೀನ್ಸoಟ್ ಡಿಸೋಜಾ, ಶೀತಲ್ ಜೈನ್, ಜೈಸನ್ ಡಿಸೋಜಾ ಹಾಗೂ ಹಲವಾರು ವರ್ತಕರು ಉಪಸ್ಥಿತರಿದ್ದರು. ಸಚಿವರೊಂದಿಗೆ ರಕ್ಷಿತ್ ಶಿವರಾಮ್, ಹರೀಶ್ ಕುಮಾರ್ ಹಾಗೂ ಪ್ರವೀಣ್ ಹಳ್ಳಿಮನೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here