ಉಜಿರೆ ಬ್ರಹ್ಮಕಲಶೋತ್ಸವ-ಕುಸುಮ ವಿಜಯರಾಘವ ಪಡೈಟ್ನಾಯರಿಂದ ಬೆನಕ ಆಸ್ಪತ್ರೆಯ ಆರೋಗ್ಯ ಕೇಂದ್ರ ಉದ್ಘಾಟನೆ

0

ಉಜಿರೆ: ಉಜಿರೆಯ ಬ್ರಹ್ಮಕಲಶೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ಈ ಐತಿಹಾಸಿಕ ಕಾರ್ಯಕ್ರಮದ ಹಿನ್ನಲೆಯಲ್ಲಿ ವಿಜಯಗೋಪುರದ ಪಕ್ಕದಲ್ಲೇ ಉಜಿರೆಯ ಬೆನಕ ಹೆಲ್ತ್ ಸೆಂಟರ್ ನ ಆರೋಗ್ಯ ಕೇಂದ್ರವನ್ನು ಮಾ.3 ರಂದು ಉದ್ಘಾಟಿಸಲಾಯಿತು.

ದಿ.ವಿಜಯರಾಘವ ಪಡ್ವೆಟ್ನಾಯರ ಪತ್ನಿ ಕುಸುಮ ವಿಜಯರಾಘವ ಪಡೆಟ್ನಾಯ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿದರು. ಕ್ಷೇತ್ರದಲ್ಲಿ ಸಾವಿರಾರು ಭಕ್ತರು ಆಗಮಿಸುವುದರಿಂದ ತುರ್ತು ಆರೋಗ್ಯ ನೆರವಿಗಾಗಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇಲ್ಲಿ ಇಬ್ಬರು ತಜ್ಞ ವೈದ್ಯರು ಹಾಗೂ ಸಿಬ್ಬಂದಿ ವರ್ಗವನ್ನು ಚಿಕಿತ್ಸಾ ಸೇವೆಗಾಗಿ ನಿಯೋಜಿಸಲಾಗಿದೆ.

ಜೊತೆಗೆ, ಬೆನಕ ಆಸ್ಪತ್ರೆಯ ಎರಡು ಅಂಬ್ಯುಲೆನ್ಸ್ ಗಳನ್ನು ಕೂಡ ತುರ್ತು ಸೇವೆಗಾಗಿ ಕ್ಷೇತ್ರದಲ್ಲಿ ನಿಯೋಜಿಸಲಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೋಕ್ತಸರ ಶರತ್ ಕೃಷ್ಣ ಪಡ್ರೆಟ್ನಾಯರ ಪತ್ನಿ ವೃಂದಾ ಶರತ್ ಕೃಷ್ಣ, ಬೆನಕ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಗೋಪಾಲಕೃಷ್ಣ ಭಟ್, ಡಾ.ಭಾರತಿ ಭಟ್. ಡಾ. ಅದಿತ್ಯ. ಡಾ.ಅಂಕಿತಾ, ಡಾ.ನವ್ಯ ಮತ್ತು ಬೆನಕ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here